ದಸರಾ ಆಚರಣೆ
ದಸರಾ ಎನ್ನುವುದು ‘ದಶಂ ಹರ’ ಎಂಬ ಸಂಸ್ಕೃತ ಶಬ್ಧದ ಅಪಭ್ರಂಶವಾಗಿದೆ. ‘ದಶ’ ಎಂದರೆ ಹತ್ತು. ‘ಹರ’ ಎಂದರೆ ನಿರ್ಮೂಲನೆ ಮಾಡುವುದು… ನಮ್ಮಲ್ಲಿರುವ ಹತ್ತು ವಿಧವಾದ ದುರ್ಗುಣಗಳನ್ನು ನಿರ್ಮೂಲನೆ ಮಾಡುವುದು ದಸರಾ ಹಬ್ಬದ ಹಿಂದಿರುವ ತತ್ವ.
ಆ ದಶ ಗುಣಗಳು:
? ಕಾಮ,
? ಕ್ರೋಧ,
? ಮೋಹ,
? ಲೋಭ,
? ಮದ,
? ಮತ್ಸರ,
? ಸ್ವಾರ್ಥ,
? ಅನ್ಯಾಯ,
? ಅಮಾನವೀಯತೆ,
? ಅಹಂಕಾರ..
ನಮಲ್ಲಿರುವ ಈ ಹತ್ತು ರಕ್ಕಸರ ಕೊಂದು ವಿಜಯ ಸಾಧಿಸುವ ದಿನವೇ ನಾವೆಲ್ಲರೂ ವಿಜೃಂಭಣೆಯಿಂದ ವಿಜಯ ದಶಮಿ ಆಚರಿಸೋಣ.
ಮಿತ್ರರೇ, ಇನ್ನೊಂದು ಕಿವಿಮಾತು.
ಈ ಹತ್ತು ದಿನಗಲ್ಲಿ ಯಾವುದೇ ಒಳ್ಳೆಯ ಕೆಲಸ ಆರಂಭಿಸಲು ಪಂಚಾಂಗ ನೋಡುವ ಅಗತ್ಯವಿಲ್ಲ.(ಯಾವ ದಿನಕ್ಕೂ ಬೇಕಿಲ್ಲ..!!)
ಎಲ್ಲರಿಗೂ ದಸರಾ ಹಬ್ಬದ ಹೃತ್ಪೂರ್ವಕ ಶುಭಾಶಯಗಳು.
– ಗುರು. ಎಸ್. ಎ.