UK Suddi
The news is by your side.

ಅ.25 ಕ್ಕೆ ರಾಜ್ಯಮಟ್ಟದ ಹೊನಲು ಬೆಳಕಿನ ಹೆಜ್ಜೆಮೇಳ ಸ್ಪರ್ಧೆ

ಅ.25 ಕ್ಕೆ ರಾಜ್ಯಮಟ್ಟದ ಹೊನಲು ಬೆಳಕಿನ ಹೆಜ್ಜೆಮೇಳ ಸ್ಪರ್ಧೆ
ಧಾರವಾಡ : ಗ್ರಾಮೀಣ ಕಲೆ ಬೆಳೆಸಿ ನಾಡಿನ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮೊಹರಂ ಮತ್ತು ದೀಪಾವಳಿ ಹಬ್ಬದ ನಿಮಿತ್ತ ಉಪ್ಪಿನಬೆಟಗೇರಿಯ ಶ್ರೀ ಬಾರಾಇಮಾಮ ಯುವಕ ಮಂಡಳದ ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯಮಟ್ಟದ ಹೊನಲು ಬೆಳಕಿನ ಹೆಜ್ಜೆಮೇಳ ಸ್ಪರ್ಧೆಯನ್ನು ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ಶ್ರೀ ಗುರು ವಿರೂಪಾಕ್ಷೇಶ್ವರ ಹೈಸ್ಕೂಲ್ ಮೈದಾನದಲ್ಲಿ ಅ.25 ರಂದು
ಸಂಜೆ 7:೦೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಸಚಿವ ವಿನಯ ಕುಲಕರ್ಣಿ ಅವರಿಂದ 25,೦೦೧ ನಗದು, ದ್ವಿತೀಯ ಸ್ಥಾನ ಪಡೆದವರಿಗೆ ಧಾರವಾಡದ ಮಕ್ತುಂಹುಸೇನ ಸೊಗಲದ ಅವರಿಂದ 2೦,೦೦1 ರೂ. ನಗದು ಹಾಗೂ ದ್ವಿತೀಯ ಸ್ಥಾನ ಪಡೆದವರಿಗೆ ಇಮಾಮಹುಸೇನ ನದಾಫ್ ಸ್ಮರಣಾರ್ಥ ಡಾ| ಡಿ.ಆಯ್.ನದಾಫ್ ಅವರಿಂದ 15,೦೦1 ರೂ. ನಗದು ಬಹುಮಾನ ಸಿಗಲಿದೆ.
ಈ ಸ್ಪರ್ಧೆಯ ಪ್ರವೇಶ ಶುಲ್ಕಕ್ಕೆ 1001 ರೂ. ನಿಗದಿ ಮಾಡಿದ್ದು, ಒಂದು ತಂಡದ ಪ್ರದರ್ಶನದ ಅವಽಯನ್ನು 12 ನಿಮಿಷಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ವೇಷ-ಭೂಷಣ, ಹೆಜ್ಜೆ-ಕಸರತ್ತು ಹಾಗೂ ತತ್ವ ಪದಗಳಿಗೆ ಆದ್ಯತೆ ನೀಡಲಿದ್ದು, ಆಯಾ ತಂಡಗಳು ತಮಗೆ ಬೇಕಾದ ಸಂಗೀತ ಉಪಕರಣಗಳನ್ನು ತಾವೇ ತರಬೇಕು. ಚಲನಚಿತ್ರಗಳ ದಾಟಿಯ ಹಾಡುಗಳಿಗೆ ಹಾಗೂ ಕ್ಯಾಸೆಟ್ ಬಳಕೆಗೆ ಅವಕಾಶವಿಲ್ಲ. ಒಂದು ತಂಡದ ಸದಸ್ಯರ ಸಂಖ್ಯೆ 25 ಜನರನ್ನು ಮೀರಬಾರದು. ಈ ಪೈಕಿ ಇದರಲ್ಲಿಯೇ ಹಾಡುವವರು ಹಾಗೂ ವಾದ್ಯವೃಂದದವರೂ ಸೇರಿರಬೇಕು. ಪುರುಷ ತಂಡ ಹಾಗೂ ಸ್ತೀಯರ ತಂಡ ಹಾಗೂ ಇಬ್ಬರೂ ಇರುವ ತಂಡಗಳಿಗೂ ಅವಕಾಶವಿದೆ. ತಂಡದ ಸದಸ್ಯರ ವಯಸ್ಸಿಗೆ ನಿರ್ಬಂಧವಿಲ್ಲ. ಆದರೆ ಅಶ್ಲೀಲ ಹಾಗೂ ಅಸಂಬದ್ಧ ಹಾಡುಗಳಿಗೆ ಈ ಸ್ಪರ್ಧೆಯಲ್ಲಿ ಅವಕಾಶವಿಲ್ಲ. ವಾದ್ಯ ವೃಂದದವರು ಒಂದು ತಂಡದಿಂದ ಇನ್ನೊಂದು ತಂಡದಲ್ಲಿ ಭಾಗವಹಿಸಬಹುದು. ಆದರೆ ಒಂದು ತಂಡದವರಿಗೆ ಒಮ್ಮೆ ಅವಕಾಶ, ಒಂದು ತಂಡದಲ್ಲಿ ಭಾಗವಹಿಸಿದ ವ್ಯಕ್ತಿಗಳು ಮತ್ತೊಂದು ತಂಡದಲ್ಲಿ ಭಾಗವಹಿಸುವಂತಿಲ್ಲ. ಹೀಗಾಗಿ ಭಾಗವಹಿಸಲು ಆಸಕ್ತ ಇರುವವರು ಅ.25 ರಂದು ಸಂಜೆ 6:೦೦ ಗಂಟೆಯೊಳಗೆ ಮೈದಾನದಲ್ಲಿ ಹಾಜರಾಗಬೇಕು. ಉಪ್ಪಿನಬೆಟಗೇರಿಯ ಬಸ್‌ನಿಲ್ದಾಣದಲ್ಲಿ ಹೆಸರು ನೋಂದಾಯಿಸಬಹುದಾಗಿದ್ದು, ಅದಕ್ಕಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊ:9880491309, 9880252605, 9743593441 ಗೆ ಅ.25 ಸಂಜೆ 4:೦೦ ಗಂಟೆಯೊಳಗೆ ಸಂಪರ್ಕಿಸಬಹುದು. 

Comments