UK Suddi
The news is by your side.

ಶಬರೀಮಲೆ: ಮುಖ್ಯ ಅರ್ಚಕರಾಗಿ ಉನ್ನಿಕೃಷ್ಣನ್ ನಂಬೂದಿರಿ

Unnikrishnan namboothiri_0

ಶಬರೀಮಲೆ: ಟಿ.ಎಂ.ಉನ್ನಿಕೃಷ್ಣನ್ ನಂಬೂದಿರಿ ಅಯ್ಯಪ್ಪ ದೇವಸ್ಥಾನದ ನೂತನ ಮೇಲ್ಸಂತಿ(ಮುಖ್ಯ ಅರ್ಚಕ) ಯಾಗಿ ನೇಮಕಗೊಂಡರು.

ಪಾಲಕ್ಕಾಡ್ ಜಿಲ್ಲೆಯ ಚೆರುಪ್ಲಸ್ಸೆರಿಯವರಾದ ಇವರು, ದೇವಳದಲ್ಲಿ ನಡೆದ ಡ್ರಾ ಫಲಿತಾಂಶದ ಮೂಲಕ ಆಯ್ಕೆಯಾದರು.
ಮಲ್ಲಿಕಾಪುರಂ ದೇವಳದ ಮುಂದಿನ ಮೇಲ್ಸಂತಿ(ಮುಖ್ಯ ಅರ್ಚಕ)ಯಾಗಿ ಚಂಗಚ್ಚೆರಿಯ ಎಂ.ಎ.ಮನುಕುಮಾರ್ ನೇಮಕರಾದರು.

ಇಬ್ಬರು ಮುಖ್ಯ ಅರ್ಚಕರು ಮುಂದಿನ ಒಂದು ವರ್ಷ ಕಾಲ (ನ.16)ರಂದು ಹುದ್ದೆಯನ್ನು ವಹಿಸಿಕೊಳ್ಳುವರು. ಈ ದಿನವು ಮಲಯಾಳಂ ತಿಂಗಳ ವೃಚ್ಚಿಕೋಂ ಆಗಿದ್ದು, ವಾಷರ್ಿಕ ತೀರ್ಥಯಾತ್ರೆಯ ಋತುವಿಗೆ ದೇವಳದ ಪುನರಾರಂಭವಾಗುವ ಕುರುಹು ಆಗಿದೆ.

Comments