UK Suddi
The news is by your side.

ಠಾಣೆಯಲ್ಲೇ ಗುಂಡು ಹಾರಿಸಿಕೊಂಡ ಪಿಎಸ್ ಐ !

Police

ಕೋಲಾರ: ಇಲ್ಲಿನ ಮಾಲೂರು ಠಾಣೆಯ ಸರ್ಕ್‌ಲ್ ಇನ್‌ಸ್‌‌ಪೆಕ್ಟರ್ ಸೋಮವಾರ ತಡರಾತ್ರಿ ಠಾಣೆಯಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ರಾತ್ರಿಪಾಳಿ ಕೆಲಸಮಾಡುತ್ತಿದ್ದ ಮಾಲೂರು ಠಾಣೆಯ ಸಿಪಿಐ ರಾಘವೇಂದ್ರ ಸೋಮವಾರ ತಡರಾತ್ರಿ ಠಾಣೆಯ ಆವರಣದಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರು ಕಳೆದ ಆರು ತಿಂಗಳ ಹಿಂದೆಯಷ್ಟೇ ಮಾಲೂರು ಠಾಣೆಗೆ ವರ್ಗಾವಣೆಗೊಂಡಿದ್ದರು. 

ಮೂಲಗಳ ಪ್ರಕಾರ ಇವರ ಆತ್ಮಹತ್ಯೆಗೆ ಮೇಲಧಿಕಾರಿಗಳ ಒತ್ತಡವೇ ಕಾರಣ ಎನ್ನಲಾಗುತ್ತಿದೆ. ಮಾಲೂರು ಠಾಣಾ ವ್ಯಾಪ್ತಿಯಲ್ಲಿ ದೊಡ್ಡ ಮಟ್ಟದ ಮರಳು ಮಾಫಿಯಗೆ ಇತ್ತೀಚೆಗಷ್ಟೇ ರಾಘವೇಂದ್ರ ಬ್ರೇಕ್ ಹಾಕಿದ್ದರು. ಮಾಲೂರು ಠಾಣಾ ವ್ಯಾಪ್ತಿಯಲ್ಲಿ ಕೈಗಾರಿಕೆಗಳೇ ಹೆಚ್ಚಾಗಿರುವುದರಿಂದ ಅಲ್ಲಿಂದಲೂ ಹೆಚ್ಚಿನ ಒತ್ತಡವಿತ್ತು ಎನ್ನಲಾಗಿದೆ. ಆದರೆ ಇವರಿಗೆ ಯಾವುದೇ ರೀತಿಯ ಕೌಟುಂಬಿಕ ಒತ್ತಡವಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ಸ್ಥಳಕ್ಕೆ ಈಗಾಗಲೇ ಎಸ್‌ಪಿ ದಿವ್ಯಾಗೋಪಿನಾಥ್ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಮಾಲೂರು ಪ್ರಕರಣ ದಾಖಲಿಸಿದ್ದಾಾರೆ. 

ಜೈಲು ಶಿಕ್ಷೆ ಅನುಭವಿಸಿದ್ದರು:

2014ರಲ್ಲಿ ಆನೆಕಲ್‌ನ ಸರ್ಜಾಪುರದಲ್ಲಿ ಪಿಎಸ್‌ಐ ಆಗಿ ಕೆಲಸ ಮಾಡುತ್ತಿದ್ದ ವೇಳೆ ಮರಳು ದಂದೆ ಪ್ರಕರಣಕ್ಕೆ  ಸಂಬಂದ ಇವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ಪ್ರಕರಣ ಸಂಬಂಧ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಮರಳು ದಂದೆಕೋರರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದರು. ಅಲ್ಲದೇ ಪ್ರಕರಣ ಕುರಿತು ಒಂದು ವಾರ ಪರಪ್ಪನ ಅಗ್ರಹಾರದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರು. 

Comments