UK Suddi
The news is by your side.

ವಿಶ್ವಕಪ್ ಕಬಡ್ಡಿ: ಭಾರತ ಸೆಮೀಸ್‌ಗೆ

india

ಅಹಮದಾಬಾದ್: ಭಾರತ ತಂಡ ವಿಶ್ವಕಪ್ ಕಬಡ್ಡಿಯ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ದುರ್ಬಲ ಇಂಗ್ಲೆಂಡ್ ತಂಡವನ್ನು 69-18 ಅಂತರದಿಂದ ಸೋಲಿಸಿದೆ. ಈ ಮೂಲಕ ‘ಎ’ ಗುಂಪಿನಿಂದ ಎರಡನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿತು.
ಟಾಸ್ ಸೋತ ಭಾರತ ಮೊದಲು ರೈಡಿಂಗ್ ಮಾಡಿತು. ನಾಯಕ ಅನೂಪ್ ತಮ್ಮ ಮೊದಲ ರೈಡ್‌ನಲ್ಲಿಯೇ ತಂಡದ ಖಾತೆ ತೆರೆದರು. ಆದರೆ ಇಂಗ್ಲೆಂಡ್ ತಂಡ ಆರಂಭದಲ್ಲಿ ಭಾರತಕ್ಕೆ ಉತ್ತಮ ಪೈಪೋಟಿ ನೀಡುವ ಲಕ್ಷಣ ತೋರಿತು.

ಮೊದಲು 2-1 ಮುನ್ನಡೆಯಲ್ಲಿದ್ದ ಇಂಗ್ಲೆಂಡ್ ಬಳಿಕ ಭಾರತದ ಆಕ್ರಮಣಕಾರಿ ಆಟಕ್ಕೆ ತತ್ತರಿಸಿತು. ಭಾರತ ಪರ ಇನ್‌ಫಾರ್ಮ್ ಆಟಗಾರರಾದ ಅಜಯ್ ಠಾಕೂರ್, ಪ್ರದೀಪ್ ನರ್ವಾಲ್ ರೈಡ್ ಮೂಲಕ ನಿರಂತರವಾಗಿ ಅಂಕಗಳನ್ನು ಸಂಪಾದಿಸಿದರು.

ಅದರಲ್ಲೂ ಪ್ರದೀಪ್ ನರ್ವಾಲ್ ಮೊದಲಾರ್ಧದಲ್ಲಿಯೇ ಸೂಪರ್-10 ಅಂಕ ಗಳಿಸಿದರು. ಆಲ್‌ರೌಂಡ್ ಆಟ ಪ್ರದರ್ಶಿಸಿದ ಸಂದೀಪ್ ನರ್ವಾಲ್ ತಮ್ಮ ಎರಡನೇ ರೈಡ್ ಅನ್ನು ಸೂಪರ್ ರೈಡ್ ಆಗಿ ಪರಿವರ್ತಿಸಿದರು ಜತೆಗೆ ಡಿಫೆನ್ಸ್ ಮೂಲಕವೂ ಮಿಂಚು ಹರಿಸಿದರು.

Comments