UK Suddi
The news is by your side.

ಹಾಕಿ: ಪಾಕ್ ಮಣಿಸಿದ ಭಾರತ

201610231813209974_India-beat-Pakistan-32-in-the-league-match-of-Asian_SECVPF (1)

 ಕೌಂಟನ್: ಏಷ್ಯ ಕಪ್ ಹಾಕಿ ಪಂದ್ಯಾವಳಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಭಾರತ 3-2 ಅಂತರದಿಂದ ಗೆಲವು ಸಾಧಸಿದೆ.

ಭಯ ತಂಡಗಳೂ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕಿಳಿದವು. ಪಾಕಿಸ್ತಾನದ ಫರೀದ್ ಅಹ್ಮದ್ ಅವರ ಉತ್ತಮ ಕ್ಷೇತ್ರ ರಕ್ಷಣೆಯಿಂದಾಗಿ ಭಾರತದ ಆಟಗಾರರು ಗೋಲ ಗಳಿಸಲು ಪರದಾಡಬೇಕಾಯಿತು. ತಲ್ವಿಂದರ್ ಅವರ ಗೋಲು ಗಳಿಸುವ ಅವಕಾಶವನ್ನು  ಪಾಕ್ ಗೋಲ್‌ಕೀಪರ್ ತಪ್ಪಿಸಿದರು.

ಹೀಗಾಗಿ ಶುರುವಿನಲ್ಲಿ ಪಾಕ್ ತಂಡದ ಆತ್ಮವಿಶ್ವಾಸ ಉತ್ತಮವಾಗಿತ್ತು. ಕ್ಷೇತ್ರ ರಕ್ಷಣೆ ಹಾಗೂ ಮಿಡ್‌ಫೀಲ್ಡ್‌ನಲ್ಲಿ ಉತ್ತಮ ಆಟವಾಡಿದ ಎದುರಾಳಿಗಳನ್ನು ನಿಯಂತ್ರಿಸಲು ಭಾರತೀಯರು ಹರಸಾಹಸ ಪಡಬೇಕಾಯಿತು. ಕೊನೆಗೂ ಪಾಕಿಸ್ತಾನ ಭದ್ರಕೋಟೆಯನ್ನು ಭೇದಿಸಿದ ಭಾರತ 1-0 ಮುನ್ನಡೆ ಸಾಧಿಸಿತು. ರೂಪಿಂದರ್ ಪಾಸ್ ಮಾಡಿದ ಚೆಂಡನ್ನು ಉತ್ತಪ್ಪ ಅಚ್ಚುಕಟ್ಟಾಗಿ ಪ್ರದೀಪ್ ಮೊರ್ ಅವರಿಗೆ ಪಾಸ್ ಮಾಡಿದರು. ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ಪ್ರದೀಪ್ ಯಶಸ್ವಿಯಾದರು.

 ಮೊದಲರ್ಧ ಮುಗಿದಾಗ ಭಾರತ 1-0ರಿಂದ ಮುನ್ನಡೆ ಸಾಧಸಿದ್ದರೂ ಭಾರತದ ಆಟಗಾರರಿಗೆ ಮತ್ತಷ್ಟು ಗೋಲುಗಳ ಅಗತ್ಯ ಕಾಡುತ್ತಿತ್ತು. ಆದರೆ ಮೈದಾನಕ್ಕಿಳಿದ ಪಾಕಿಸ್ತಾನದ ಆಟಗಾರರು ಮತ್ತಷ್ಟು ಉತ್ಸಾಹದಿಂದ ಆಟವಾಡಿ ಕೆಲಸ ನಿಮಿಷಗಳಲ್ಲಿ ಖಾತೆ ತೆರೆದು ಸಮಬಲ ಸಾಧಿಸಿದರು. ಮುಹಮ್ಮದ್ ರಿಜ್ವಾನ್ ಈ ಗೋಲನ್ನು ಬಾರಿಸಿದರು. 

ಎರಡೂ ತಂಡಗಳು ಸಮಬಲ ಸಾಧಿಸಿದ್ದರಿಂದ ಮತ್ತಷ್ಟು ಪಂದ್ಯದಲ್ಲಿ ಚುರುಕು ಮೂಡಿತು. ಭಾರತದ ಆಟಗಾರರು ಕ್ಷೇತ್ರ ರಕ್ಷಣೆಯಲ್ಲಿ ಎಸಗಿದ ತಪ್ಪನ್ನು ಬಳಸಿಕೊಂಡ ಪಾಕಿಸ್ತಾನದ ಮುಹಮ್ಮದ್ ಇರ್ಫಾನ್ ಅವರ ಆಕರ್ಷಕ ಹೊಡೆತ ಗೋಲ್‌ಪೋಸ್ಟ್ ಸೇರಿತು. ಈಗ ಪಾಕಿಸ್ತಾನ 2-1ರಿಂದ ಮುನ್ನಡೆ ಸಾಧಿಸಿತು. ಇದರಿಂದಾಗಿ ಭಾರತದ ಒತ್ತಡ ಮತ್ತಷ್ಟು ಹೆಚ್ಚಿಸಿತು. 
ನಂತರ ಭಾರತಕ್ಕೆ ಸಿಕ್ಕ ಮೊದಲ ಪೆನಾಲ್ಟಿ ಕಾರ್ನ್‌ರ್ ಅವಕಾಶವನ್ನು ತಜ್ಞ ರೂಪಿಂದರ್ ಸಿಂಗ್ ಅವರು ಶಕ್ತಿಯುತ ಹೊಡೆತದಿಂದ ಗೋಲ್ ಗಳಿಸಿದರು. ಈ ಮೂಲಕ ಭಾರತ-ಪಾಕಿಸ್ತಾನ ತಂಡಗಳು 2-2ರಿಂದ ಸಮಬಲ ಸಾಧಿಸಿದವು. ಮುಂದಿನ ಕೆಲವೇ ಕ್ಷಣಗಳಲ್ಲಿ ರಮಣದೀಪ್ ಅವರು ಭಾರತದ ಪರ ಮತ್ತೊಂದು ಗೋಲು ಬಾರಿಸಿ 3-2ರಿಂದ ಮುನ್ನಡೆ ಸಾಧಿಸಿದರು. ನಂತರ ಪಾಕಿಸ್ತಾನದ ಆಟಗಾರರು ಭಾರತದ ಭದ್ರಕೋಟೆಯನ್ನು ಭೇದಿಸಲಾಗದೆ ಸೋಲನ್ನೊಪ್ಪಿಕೊಂಡರು. 

Comments