UK Suddi
The news is by your side.

ಎನ್‌ಕೌಂಟರ್: 24 ನಕ್ಸಲರ ಹತ್ಯೆ

images

ಭುವನೇಶ್ವರ: ಆಂಧ್ರಪ್ರದೇಶ-ಒಡಿಶಾ ಗಡಿಪ್ರದೇಶ ಮಲಕಾನಗಿರಿಯಲ್ಲಿ ಸೋಮವಾರ ನಸುಕಿನಲ್ಲಿ ಉಭಯ ರಾಜ್ಯಗಳ ಪೊಲೀಸರು ನಡೆಸಿದ ಜಂಟಿ ಕಾರ್ಯಚರಣೆಯಲ್ಲಿ 24 ಮಾವೋವಾದಿಗಳು ಹತರಾಗಿದ್ದಾರೆ.

ನಕ್ಸಲರು ಮತ್ತು ಪೊಲೀಸರ ಮಧ್ಯೆ ಒಂದು ಗಂಟೆಗೂ ಹೆಚ್ಚು ಕಾಲ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಎಂಟು ಮಹಿಳೆಯರು ಸೇರಿದಂತೆ 24 ನಕ್ಸಲರು ಬಲಿಯಾಗಿದ್ದಾರೆ. ಗುಂಡೇಟಿನಿಂದ ತೀವ್ರ ಗಾಯಗೊಂಡಿದ್ದ ಆಂಧ್ರಪ್ರದೇಶದ ಪೇದೆಯೊಬ್ಬರು ವಿಶಾಖಪಟ್ಟಣಂ ಆಸ್ಪತ್ರೆಯಲ್ಲಿ ಕೊನಯುಸಿರೆಳೆದಿದ್ದು, ಇನ್ನೊಬ್ಬ ಪೇದೆಯ ಸ್ಥಿತಿ ಗಂಭೀರವಾಗಿದೆ.

Comments