UK Suddi
The news is by your side.

ಕಿತ್ತೂರಿಗೆ ತಾಲೂಕು ಸ್ಥಾನಮಾನ: ಕಾಗೋಡು

Kagodu-Thimmappa-229x300

ಕಿತ್ತೂರು: ಮೂರು ದಿನಗಳ ಕಿತ್ತೂರು ಉತ್ಸವ-2016 ಉದ್ಘಾಟಿಸಿ ಮಾತನಾಡಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಒಂದು ತಿಂಗಳ ಅವಧಿಯಲ್ಲಿ ಕಿತ್ತೂರಿಗೆ ತಾಲೂಕು ಮಾನ್ಯತೆ ದೊರಕಿಸಲು ಸರ್ವ ಪ್ರಯತ್ನ ಮಾಡುವುದಾಗಿ ಹೇಳಿದರು.

ಕಿತ್ತೂರು ರಾಣಿ ಚೆನ್ನಮ್ಮ ಅವರಿಗೆ ಗೌರವ ಸಲ್ಲಿಸುತ್ತ, ತಹಸೀಲ್ದಾರ್ ಸೇರಿದಂತೆ ಎಲ್ಲ ಸರಕಾರಿ ಕಚೇರಿಗಳಿಗೆ ಅಗತ್ಯ ಸೌಲಭ್ಯ ನೀಡಲಾಗುವುದು. ಕಿತ್ತೂರಿಗೆ ಈ ಮೊದಲೇ ತಾಲೂಕು ಮಾನ್ಯತೆ ನೀಡಬೇಕಿತ್ತು. ಆದರೆ, ಜಿಲ್ಲಾಡಳಿತದ ನಿರುತ್ಸಾಹ ಇದಕ್ಕೆ ತಣ್ಣೀರು ಎರಚಿದೆ. ಹಿಂದಿನ ಸರಕಾರದಲ್ಲೂ ಈ ಕುರಿತು ಪ್ರಸ್ತಾವವಿತ್ತು  ಎಂದು ತಿಳಿಸಿದರು.

Comments