ಜಿಯೋ ವೆಲ್ಕಂ ಆಫರ್ ಡಿ.3ಕ್ಕೆ ಕೊನೆ; ಡಿ.31ರ ವರೆಗೂ ಫ್ರೀ ಡಾಟಾ
ಮುಂಬಯಿ : ಡಿ.31ರ ವರೆಗೂ ಜಿಯೋ ಬಳಕೆದಾರರಿಗೆ ಫ್ರೀ ಡಾಟಾ ಸಿಗುತ್ತದೆ ಎಂದು ಮುಖೇಶ್ ಅಂಬಾನಿಯವರು ಸೋಮವಾರದಂದು ತಿಳಿಸಿದ್ದಾರೆ.
ಅದೇ ರೀತಿ ಬಳಕೆದಾರರು ಉಚಿತ ಕನೆಕ್ಷನ್, ಉಚಿತ ಡಾಟಾ ಮತ್ತು ಉಚಿತ ವಾಯ್ಸ ಸರ್ವಿಸ್ನ ರಿಲಯನ್ಸ್ ಜಿಯೋ ವೆಲ್ಕಂ ಆಫರ್ ಡಿಸೆಂಬರ್ 3ಕ್ಕೆ ಕೊನೆಗೊಳ್ಳುತ್ತದೆ; ಡಿ.3ರೊಳಗೆ ಜಿಯೋ ವೆಲ್ಕಂ ಆಫರ್ ಪಡೆದಲ್ಲಿ ಅವರಿಗೆ ಡಿಸೆಂಬರ್ 31ರ ವರೆಗೂ ಉಚಿತ ಜಿಯೋ ಸೇವೆ ಸಿಗಲಿದೆ ಎಂದು ಕಂಪೆನಿ ಹೇಳಿದೆ.
ಭಾರ್ತಿ ಏರ್ಟೆಲ್, ಐಡಿಯಾ ಸೆಲ್ಯುಲರ್ ಮತ್ತು ಟೆಲಿನಾರ್ ಕಂಪೆನಿಗಳಿಗೆ ಟ್ರಾಯ್ ಕಳೆದ ಗುರವಾರ ರವಾನಿಸಿದ ಸಂದೇಶದ ಪ್ರಕಾರ “ರಿಲಯನ್ಸ್ ಜಿಯೋ ಪರಿಷ್ಕೃತ ಆಫರ್ ಪ್ರಕಾರ ಉಚಿತ ಸೇವೆಯು 90 ದಿನಗಳಿಗೆ ಅನ್ವಯವಾಗುವಂತೆ 2016ರ ಡಿಸೆಂಬರ್ 31ಕ್ಕೆ ಕೊನೆಗೊಳ್ಳಲಿದೆ; ಆ ಪ್ರಕಾರ ಡಿ.31ರ ವರೆಗೆ ಉಚಿತ ಸೇವೆ ನೀಡುವ ರಿಲಯನ್ಸ್ ಜಿಯೋ ಆಫರ್, ಪ್ರಚಾರ ಕೊಡುಗೆಯ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿಯೇ ಇದೆ ಎಂದು ಕಂಪನಿ ತಿಳಿಸಿದೆ.