UK Suddi
The news is by your side.

ಯಶ್- ರಾಧಿಕ ಪಂಡಿತ್ ಮದುವೆಗೆ ಮುಹೂರ್ತ ಫಿಕ್ಸ್

image_760x400

ಬೆಂಗಳೂರು: ಗೋವಾದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಮತ್ತು ಕನಸಿನ ರಾಣಿ ರಾಧಿಕ ಪಂಡಿತ್ ಮದುವೆ ಫಿಕ್ಸ್ ಆಗಿದ್ದು, ಡಿಸೆಂಬರ್ 10 ಮತ್ತು 11ರಂದು ಈ ತಾರಾ ಜೋಡಿಯ ವಿವಾಹ ನೆರವೇರಲಿದೆ.

ಗೋವಾದಲ್ಲಿ ನಿಶ್ಚಿತಾರ್ಥ ನಡೆದಿದಕ್ಕೆ ತೀವ್ರ ಟೀಕೆ ಎದುರಾಗಿದ್ದರಿಂದ ಮತ್ತು ಅಭಿಮಾನಿಗಳ ಒತ್ತಾಯದ ಮೇರೆಗೆ ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ವಿವಾಹ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಆಗಸ್ಟ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ತಾರಾ ಜೋಡಿ ಶೀಘ್ರವೇ ಮದುವೆಯಾಗುವುದಾಗಿ ಹೇಳಿದ್ದರು, ಸದ್ಯ ಈ ಜೊಡಿ ಅಭಿನಯದ ಸಂತು ಸ್ಟ್ರೈಟ್ ಫಾರ್ವಡ್ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು, ಚಿತ್ರ ಬಿಡುಗಡೆಯ ನಂತರ ಮದುವೆ ತಯಾರಿ ಶುರುವಾಗಲಿದೆ ಎನ್ನಲಾಗಿದೆ.

Comments