ಟಿಪ್ಪು ಜಯಂತಿ ಆಚರಣೆ ಹಿಂದೆ ವೋಟ್ ಬ್ಯಾಂಕ್ ರಾಜಕಾರಣ: ಶೆಟ್ಟರ್
ಹುಬ್ಬಳ್ಳಿ: ಜಾತಿ ಜಾತಿಯಲ್ಲಿ ವೈಷಮ್ಯವನ್ನು ಹುಟ್ಟು ಹಾಕಲು ಟಿಪ್ಪು ಜಯಂತಿಯನ್ನು ಆಚರಿಸಲು ರಾಜ್ಯ ಸರ್ಕಾರ ಹೊರಟಿದೆ ಎಂದು ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಶುಕ್ರವಾರದಂದು ಆರೋಪಿಸಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಟಿಪ್ಪು ಜಯಂತಿಯನ್ನು ಕಾಂಗ್ರೆಸ್ ಸರ್ಕಾರದ ವೋಟ್ ಬ್ಯಾಂಕಿಗಾಗಿ ಬಳಸಿಕೊಳ್ಳುತ್ತಿರುವುದು ವಿಪರ್ಯಾಸ. ಸರ್ಕಾರ ಒಮ್ಮೆ ಟಿಪ್ಪು ಇತಿಹಾಸವನ್ನು ತೆರೆದು ನೋಡಿದ್ರೆ ಆತನ ಚರಿತ್ರೆ ಗೊತ್ತಾಗಲಿದೆ ಎಂದರು.
ಟಿಪ್ಪು ಒಬ್ಬ ಧರ್ಮಾಂಧನಾಗಿದ್ದು, ಆತನಿಂದ ಸಾಕಷ್ಟು ಜನ ದಬ್ಬಾಳಿಕೆ ಹಾಗೂ ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಟಿಪ್ಪು ಜಯಂತಿಯನ್ನು ಯಾವ ಪುರುಷಾರ್ಥಕ್ಕೆ ಆಚರಿಸಬೇಕು ಎಂಬದನ್ನು ಸಾಬೀತುಪಡಿಲಿ. ಟಿಪ್ಪು ಜಯಂತಿಯ ಬದಲಿಗೆ ಅಬ್ದುಲ್ ಕಲಾಂ ಅವರ ಜಯಂತಿಯನ್ನು ಆಚರಿಸಿದ್ರೆ ಅದನ್ನು ಸ್ವಾಗತಿಸುತ್ತೇವೆ ಎಂದರು.