UK Suddi
The news is by your side.

ಮೂವರು ಬಾಲಕರು ನೀರು ಪಾಲು

07smgph16

ಇಂಡಿ: ತಾಲೂಕಿನ ಸಾಲೋಟಗಿ ಗ್ರಾಮದ ಬಳಿ ಹಾದು ಹೋಗಿರುವ ಇಂಡಿ ಮುಖ್ಯ ಕಾಲುವೆಯಲ್ಲಿ ಈಜಲು ಹೋದ ಮೂವರು ಬಾಲಕರು ನೀರು ಪಾಲಾದ ಘಟನೆ ಶುಕ್ರವಾರ ನಡೆದಿದೆ.

ಸಾಲೋಟಗಿ ಗ್ರಾಮದ 15 ವರ್ಷದ ವಸೀಮ ನಿಜಮ ಮುಲ್ಲಾ, 14 ವರ್ಷದ ಇಮರಾನ ಮಹ್ಮದ ಗಾಲಿಬವಾಲೆ ಹಾಗೂ ಫಯಾಜ ಕುತಬ್ ಅತ್ತಾರ (16) ನೀರು ಪಾಲಾದ ಬಾಲಕರು. ಮೂವರು ಎಂದಿನಂತೆ ಈಜಲು ಹೋಗಿದ್ದರು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಇಂಡಿ ಪೊಲೀಸ್ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿದ್ದು, ಕೊಚ್ಚಿ ಹೋದ ಬಾಲಕರ ಶವ ಶೋಧ ಕಾರ್ಯ ನಡೆದಿದೆ.

ಕಾಲುವೆಯಲ್ಲಿ ಹೆಚ್ಚು ನೀರು ಹರಿಯುತ್ತಿರುವುದರಿಂದ ಶವ ಹುಡುಕಾಟಕ್ಕೆ ಸಮಸ್ಯೆಯಾಗಿದೆ ಎಂದು ಹೇಳಲಾಗಿದೆ. ಕಾಲುವೆಯಲ್ಲಿನ ನೀರು ಸ್ಥಗಿತಗೊಳಿಸಿ ಶವ ಶೋಧ ಕಾರ್ಯ ನಡೆಸುವಂತೆ ಶಾಸಕ ಯಶವಂತರಾಯಗೌಡ ಪಾಟೀಲ ಕೆಬಿಜೆಎಲ್‌ಎನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Comments