UK Suddi
The news is by your side.

ಇನ್ನೂ 29 ತಾಲೂಕುಗಳು ಬರ ಪೀಡಿತ : ಕಾಗೋಡು ತಿಮ್ಮಪ್ಪ

Kagodu

ಬೆಂಗಳೂರು: ರಾಜ್ಯದ ಇನ್ನೂ 29 ತಾಲೂಕುಗಳು ಬರ ಪೀಡಿತ ಎಂದು ಘೋಷಿಸುವ ಸಾಧ್ಯತೆಗಳಿವೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ ಪರಿಸ್ಥಿತಿ ಬಗ್ಗೆ ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಅಕ್ಟೋಬರ್ ಅಂತ್ಯದ ವರೆಗೆ ಎಲ್ಲ ತಾಲೂಕುಗಳಲ್ಲಿನ ಸ್ಥಿತಿಗತಿಗಳ ವರದಿ ತರಿಸಲಾಗಿದೆ. ಈ ವೇಳೆ ಇನ್ನೂ 29 ತಾಲೂಕು ಸೇರಿಕೊಂಡಲ್ಲಿ ಒಟ್ಟಾರೆ 139 ತಾಲೂಕುಗಳು ಬರಪೀಡಿತ ಪ್ರದೇಶದ ಪಟ್ಟಿಗೆ ಸೇರಲಿದೆ. ಮುಂದಿನ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

Comments