UK Suddi
The news is by your side.

ನಕಲಿ ಕರೆನ್ಸಿ ನೋಟು: ಸ್ವೀಕರಿಸುವ ಮುನ್ನ ಎಚ್ಚರ

201501241000-500-rupee-indian-banknotes-allowed-in-nepal-600x0

ಮುಂಬಯಿ: ರೂ. 500 ಹಾಗೂ ರೂ. 1000 ನಕಲಿ ಕರೆನ್ಸಿ ನೋಟಿನ ಚಲಾವಣೆ ಕುರಿತು ಆತಂಕ ವ್ಯಕ್ತವಾಗುತ್ತಿರುವ ನಡುವೆಯೇ, ಆರ್.ಬಿ.ಐ, ಹಣ ಸ್ವೀಕರಿಸುವ ಸಂದರ್ಭ ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರಲ್ಲಿ ವಿನಂತಿಸಿದೆ.

ಸಾಮಾನ್ಯವಾಗಿ ಹಣ ಚಲಾವಣೆಗೊಳ್ಳುವ ಸಂದರ್ಭ, ನಕಲಿ ನೋಟುಗಳು ಬಳಕೆಗೆ ಬರುತ್ತಿರುವ ಕುರಿತು ದೂರು ನಮ್ಮ ಗಮನಕ್ಕೆ ಬಂದಿದ್ದು, ಸಂಶಯಿತ ವ್ಯಕ್ತಿಗಳು ಭಾಗಿಯಾಗಿರುವ ಸಂಭವವಿದೆ ಎಂದು ಆರ್. ಬಿ.ಐ ತಿಳಿಸಿದೆ.

ಬ್ಯಾಂಕಿನ ನೋಟಿಗೆ ಸಂಬಂಧಿಸಿದ ಸುರಕ್ಷತಾ ನಿಯಮಗಳನ್ನು ಆರ್.ಬಿ.ಐ ವೆಬ್ ಸೈಟಿನಲ್ಲಿ ಪಡೆಯಬಹುದಾಗಿದೆ.  ಹಣ ಸ್ವೀಕರಿಸುವ ಸಂದರ್ಭ ಎಚ್ಚರಿಕೆ ವಹಿಸುವಂತೆ ಹಾಗೂ ನಕಲಿ ನೋಟು ಚಲಾವಣೆಯಲ್ಲಿ ಭಾಗಿಯಾದವರ ಕುರಿತು ಮಾಹಿತಿ ನೀಡುವಂತೆ ಆರ್.ಬಿ.ಐ ಸಾರ್ವಜನಿಕರಲ್ಲಿ ವಿನಂತಿಸಿದೆ.

Comments