UK Suddi
The news is by your side.

ನಿಮ್ಮ ಪರಿಸರ ಕಾಳಜಿ ದೀಪಾವಳಿಯಲ್ಲಿ ಮಾತ್ರವೇ?

ಗೋವು, ಕುರಿ ಹಾಗು ಒಂಟೆಗಳನ್ನು ಕೊಂದು ತಿನ್ನುವಾಗ ನೆನಪಾಗದ ಪ್ರಾಣಿ ಹಿಂಸೆ, ಪರಿಸರ ಮಾಲಿನ್ಯ,
೩೬೫ ದಿನಾನೂ ಲೌಡ್ ಸ್ಪೀಕರ್ ಹಾಕಿ ಕಿರುಚುವಾಗಲೂ ನೆನಪಾಗದ ಶಬ್ದ ಮಾಲಿನ್ಯ ಪರಿಸರ ಕಾಳಜಿ, ದೀಪಾವಳಿ ಬಂತೆಂದರೆ ನಮ್ಮ ಮುಖ್ಯಮಂತ್ರಿಗಳಿಗೆ ಥಟ್ ಅಂತ ನೆನಾಪಾಗುತ್ತೆ. ಪ್ರತೀ ವರ್ಷ ದೀಪಾವಳಿ ಬಂತೆಂದರೆ ನಮ್ಮ ಮಾದ್ಯಮಗಳಲ್ಲಿ ಯಾವಾಗಲೂ ಒಂದು ಜಾಹೀರಾತು ಬರುತ್ತೆ ಅದೇನೆಂದರೆ “ದೀಪಾವಳಿ ಆಚರಿಸಿ ಆದರೆ ಪಟಾಕಿ ಸುಡಬೇಡಿ”. ಪಟಾಕಿ ಸುಟ್ಟರೆ ವಾಯುಮಾಲಿನ್ಯವಾಗುತ್ತೆ ಶಬ್ಧ ಮಾಲಿನ್ಯವಾಗುತ್ತೆ ಅನ್ನೋ ಸಬೂಬು.
ಅಲ್ಲ ಸ್ವಾಮಿ ಪ್ರತಿವರ್ಷ ಈದ್ ವೇಳೆ ಲಕ್ಷಾಂತರ ಪ್ರಾಣಿಗಳ ಮಾರಣಹೋಮವಾಗುತ್ತೆ, ಪ್ರತಿದಿನ ಲೌಡ್ ಸ್ಪೀಕರ್ ಬಳಸಿದರೆ ಶಬ್ದಮಾಲಿನ್ಯವಾಗುತ್ತೆ ಅನ್ನೋದು ನಿಮಗೆ ಗೊತ್ತಿಲ್ಲವಾ? ದೀಪಾವಳಿ ಸಮಯದಲ್ಲಿ ನೆನಪಾಗುವ ಈ ಎಲ್ಲ ಮಾಲಿನ್ಯಗಳು ಬೇರೆಯವರ ಹಬ್ಬಗಳಲ್ಲಿ ಯಾಕೆ ನೆನಪಾಗುವುದಿಲ್ಲ ನಿಮಗೆ? ಆವಾಗ ಎಲ್ಲಿರುತ್ತೆ ನಿಮ್ಮ ಅಭೂತಪೂರ್ವ ಪರಿಸರ ಕಾಳಜಿ?
ಬರೀ ಪಟಾಕಿ ಸುಟ್ಟರೆ ಪರಿಸರ ಮಾಲಿನ್ಯ ವಾಯು ಮಾಲಿನ್ಯ ಶಬ್ದಮಾಲಿನ್ಯ ಆಗುತ್ತೆ ಅಂತ ಜಾಹೀರಾತು ಕೊಡುವ ನಮ್ಮ ಸರ್ಕಾರ, ಬೇರೆಯವರ ಹಬ್ಬಗಳಲ್ಲಿ ಪ್ರಾಣಿ ಹಿಂಸೆ ಮಾಡದೆ ಹಬ್ಬ ಆಚರಿಸಿ ಅಂತ ಹೇಳೋ ಧೈರ್ಯ ಇದೆಯಾ ಇಮಮಲ್ಲಿ?  ಕೆಲ ದಿನಗಳ ಹಿಂದೆ ಯಾರೋ ಹೇಳಿದ್ರು ಅಂತ ಪ್ರಾಣಿಹಿಂಸೆಯ ನೆಪದಲ್ಲಿ ನಮ್ಮ ದಕ್ಷಿಣ ಕನ್ನಡದ ಪ್ರಸಿದ್ದ ಐತಿಹಾಸಿಕ ಕ್ರೀಡೆ ಕಂಬಳ ನಿಲ್ಲಿಸುವುದಕ್ಕೂ ಕೈ ಹಾಕಿತ್ತು ನಿಮ್ಮ ಸರ್ಕಾರ. ಹೈಕೋರ್ಟ್ ಮೊನ್ನೆತಾನೆ ಕಂಬಳ ನಿಷೇದದ ವಿಚಾರವನ್ನು ತಳ್ಳಿ ಹಾಕಿತು.
ಅಲ್ಲ ಸ್ವಾಮಿ ನಮ್ಮ ದೇಶದ ಬಹು ದೊಡ್ಡ ಬೆಳಕಿನ ಹಬ್ಬ ಅದು ದೀಪಾವಳಿ ಅದು ಕೋಟಿ ಕೋಟಿ ಹಿಂದೂಗಳ ಭಾವನಾತ್ಮಕ ಹಬ್ಬ. ರಾವಣನು ಸೀತಾ ಮಾತೆಯನ್ನು ಅಪಹರಿಸಿ ಲಂಕೆಗೆ ಹೋದಾಗ ಶ್ರೀ ರಾಮನು ಕಪಿ ಸೇನೆಯ ಸಹಾಯದಿಂದ ಲಂಕೆಗೆ ಹೋಗಿ ಅಲ್ಲಿ ರಾವಣನನ್ನು ಸಂಹಾರ ಮಾಡಿದ ದಿನವೇ ದಶರೆಯ ದಿನ, ಅಲ್ಲಿಂದ ಹಿಂದಿರುಗಿದ ಅವನು ಮತ್ತೆ ೨೧ ದಿನಗಳ ನಂತರ ಅಯೋದ್ಯೆ ತಲುಪಿದ ದಿನವೇ ದೀಪಾವಳಿಯನ್ನಾಗಿ ಆಚರಿಸಲಾಗುತ್ತೆ. ಅವತ್ತು ಅಯೋದ್ಯೆಯ ಪ್ರಜೆಗಳೆಲ್ಲಾ ಬೆಳಕಿನ ಹಬ್ಬ ಆಚರಿಸಿದ ದಿನ ಅದು. ದೀಪಾವಳಿಯು ಸಾವಿರ ಸಾವಿರ ವರ್ಷಗಳೈಂದ ಬಂದ ಆಚರಣೆ. ದೀಪಾವಳಿಯು ಪ್ರತಿ ಮನುಷ್ಯನ ಮನಸ್ಸುಗಳಲ್ಲಿ ದೀಪ ಬೆಳಗಿಸುತ್ತಾ ಬಂದ ಹಬ್ಬ, ದೀಪಾವಳಿಯನ್ನು ಭಾರತ ಮಾತ್ರವಲ್ಲದೆ ಬೇರೆ ಬೇರೆ ರಾಷ್ಟ್ರಗಳೂ ಆಚರಿಸುತ್ತವೆ.
ವರ್ಷಕ್ಕೆ ಒಮ್ಮೆ ಮಾತ್ರ ಬರುವ ದೀಪಾವಳಿಯಲ್ಲಿ ಸುಡುವ ಪಟಾಕಿ ವಾಯುಮಾಲಿನ್ಯ ಶಬ್ದಮಾಲಿನ್ಯ ಪರಿಸರಮಾಲಿನ್ಯ ಮಾಡುತ್ತದೆ ಎಂದಾದರೆ, ವರ್ಷದಲ್ಲಿ ಬರುವ ಬೇರೆಯವರ ಎರಡು-ಮೂರು ಹಬ್ಬಗಳಲ್ಲಿ ಪ್ರಾಣಿ ಹಿಂಸೆ, ಪ್ರಾಣಿ ಬಲಿ ಮಾಡಲಾಗುತ್ತದೆ. ಅದು ಸರ್ಕಾರಕ್ಕೆ ಗೊತ್ತಿಲ್ಲವಾ? ಪ್ರಾಣಿಹಿಂಸೆಯ ನೆಪದಲ್ಲಿ ಕಂಬಳವನ್ನು ನಿಲ್ಲಿಸುವ ನಿರ್ದಾರ ತೆಗೆದುಕೊಳ್ಳುವ ನೀವು, ಅದೇ ಪ್ರಾಣಿ ಹಿಂಸೆ ಬೇರೆ ಯಾವ ಹಬ್ಬಗಳಲ್ಲೂ ಕಾಣುವುದಿಲ್ಲವಾ? ಲಕ್ಷಗಟ್ಟಲೆ ಪ್ರಾಣಿಗಳು ಭಕ್ಷಕರ ಪಾಲಾಗುತ್ತಿಲ್ಲವೇ? ಪರಿಸರದ ಬಗ್ಗೆ ಪ್ರಾಣಿಗಳ ಬಗ್ಗೆ ಇರುವ ನಿಮ್ಮ ಕಾಳಜಿಯನ್ನು ಎಲ್ಲಾ ಸಮಯದಲ್ಲೂ ಎಲ್ಲಾ ಹಬ್ಬದಲ್ಲಿಯೂ ವ್ಯಕ್ತಪಡಿಸಿ, ಜಾಹೀರಾತು ಕೊಡಿ.
ಯಾಕ್ರೀ ಬರಿ ನಿಮಗೆ ಹಿಂದೂ ಆಚರಣೆಗಳು ಕಣ್ಣು ಚುಚ್ಚುತ್ತೆ?  ಹಾ ಇದಕ್ಕೆ ಕಾರಣ ಜನಸಾಮಾನ್ಯನಿಗೆ ತಿಳಿಯದೇ ಇರದು.
ವರ್ಷಕ್ಕೆ ಒಮ್ಮೆ ಬರುವ ನಮ್ಮ ದೀಪಾವಳಿ ಹಬ್ಬವನ್ನು ನಾವು ಪಟಾಕಿ ಸಿಡಿಸಿಯೇ ಆಚರಿಸುತ್ತೇವೆ ಅದು ನಮ್ಮ ಆಚರಣೆ, ಅದು ನಮ್ಮ ಭಾವನೆಗಳ ಹಬ್ಬ. ನಿಮ್ಮ ಪರಿಸರ ಸಂರಕ್ಷಣೆಯ ಕಾಳಜಿ ಬರೇ ಹಿಂದೂ ಆಚರಣೆಗಳ ಮೇಲೆ ತೋರಿಸದೇ ರಾಜಕಾರಣ ಮಾಡದೇ, ಜನರ ಭಾವನೆಗಳಿಗೆ ದಕ್ಕೆ ತರದೇ, ಜನರಿಗೆ ದೀಪಾವಳಿ ಆಚರಣೆಗೆ ಅವಕಾಶ ಕೊಡಿ.
ನೋಡೋಣ, ಮುಂದಿನ ವರ್ಷ ಬೇರೆಯವರ ಹಬ್ಬದಲ್ಲಿ “ಪ್ರಾಣಿ ಹಿಂಸೆ ಮಾಡದೆ ಹಬ್ಬ ಆಚರಿಸಿ” ಅಂತ ಜಾಹೀರಾತು ಕೊಡುತ್ತೀರಾ ಅಂತ. 
ಯೆಲ್ಲರಿಗೂ ದೀಪಾವಳಿಯ ಶುಭಾಶಯಗಳು. ಪಟಾಕಿಹೋಡೆದು ದೀಪಾವಳಿ ಆಚರಿಸಿ. ಅದು ನಮ್ಮ ಹಬ್ಬ.
-ಗಂಗಾಧರ್ ಅಮ್ಮಲಜೇರಿ
gammalajeri@gmail.com

Comments