UK Suddi
The news is by your side.

ಹಾಕಿ: ಭಾರತವೇ ಚಾಂಪಿಯನ್

800x480_image59679343

ಕ್ವಾಂಟಾನ್: ಏಷ್ಯನ್ ಹಾಕಿ ಚಾಂಪಿಯನ್ ಶಿಪ್‌ನ ಹಾಲಿ ಚಾಂಪಿಯನ್ ಪಾಕಿಸ್ತಾನವನ್ನು ಮಣಿಸಿದ ಭಾರತ ಈ ಬಾರಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ದೀಪಾವಳಿಯ ಸಂಭ್ರಮದಲ್ಲಿರುವ ಭಾರತೀಯರಿಗೆ ಪಾಕ್‌ ಎದುರಿನ ಹೈವೋಲ್ಟೇಜ್ ಫೈನಲ್ ಪಂದ್ಯವನ್ನು ಗೆದ್ದು ಹಾಕಿ ಆಟಗಾರರು ಸಿಹಿ ಹಂಚಿದ್ದಾರೆ. ಮಲೇಷ್ಯಾದಲ್ಲಿ ನಡೆದ ಏಷ್ಯನ್ ಹಾಕಿ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದಲ್ಲಿ ಭಾರತ-ಪಾಕ್ ಮುಖಾಮುಖಿಯಾಗಿದ್ದವು. ಭಾರತ ತಂಡದ ಆಟಗಾರ ರೂಪಿಂದರ್ ಪಾಲ್ 18 ನಿಮಿಷದಲ್ಲಿಯೇ ಮೊದಲ ಗೋಲು ಬಾರಿಸಿದರು.

ಇನ್ನು 23ನೇ ನಿಮಿಷದಲ್ಲಿ ಜೋಸೆಫ್ ಎರಡನೇ ಗೋಲು ಗಳಿಸಿ ಭಾರತಕ್ಕೆ 2-0 ಮುನ್ನಡೆ ನೀಡಿದರು. ನಂತರ ಪಾಕಿಸ್ತಾನ ಆಟಗಾರ ಅಲೀಮ್ ಬಿಲಾಲ್‌ 26 ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಇದರಿಂದ ಮೊದಲಾರ್ಧದಲ್ಲಿ ಭಾರತ2-1 ಮೇಲುಗೈ ಸಾಧಿಸಿತ್ತು.ಇನ್ನು ಅಲಿ ಶಾನ್ ಪಾಕಿಸ್ತಾನಕ್ಕೆ ಆಟದ 38 ನೇ ನಿಮಿಷದಲ್ಲಿ ಗೋಲು ಗಳಿಸಿ 2-2ರ ಸಮಬಲದಿಂದ ಪಂದ್ಯವನ್ನು ರೋಚಕಗೊಳಿಸಿದರು. ಆದರೆ, 51 ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿದ ಭಾರತ 3-2 ಅಂತರದಲ್ಲಿ ಗೆಲುವಿನ ನಗೆ ಬೀರಿತು.

Comments