UK Suddi
The news is by your side.

ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆ : ಜಮಖಂಡಿ

ಜಮಖಂಡಿ : ಜಮಖಂಡಿಯ “ಕನ್ನಡ ಸಂಘ(ರಿ) ಜಮಖಂಡಿ ವತಿಯಿಂದ”ಸುವರ್ಣ ಸಂಭ್ರಮ” ಕಾರ್ಯಕ್ರಮ ಅದ್ಧೂರಿಯಿಂದ ನಡೆಯಿತು… ಕನ್ನಡ ಸಂಘದ ಅಧ್ಯಕ್ಷರಾದ ಸಿದ್ದು ನ್ಯಾಮಗೌಡ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇಸಾಯಿ ಸರ್ಕಲ್ ಮೂಲಕ ನಗರದ ಬಾಲಕಿಯರ ಶಾಲೆಗೆ ಸೇರುವ ಮೂಲಕ ಕೊನೆಗೊಂಡಿತು.. 

ಮೆರವಣಿಗೆ ಉದ್ದಕ್ಕೂ ನಾಡ ದೇವಿ ಭುವನೇಶ್ವರಿ ತಾಯಿಯ ಅಂಬಾರಿ ಹೊತ್ತ ಆನೆ ಮತ್ತು ನಾಡಿಗೆ ಕೊಡುಗೆ ನೀಡಿದ ಮಹನಿಯರ ಭಾವಚಿತ್ರಗಳನ್ನು ಹೊಂದಿದ್ದ ಚಕ್ಕಡಿಗಳು ನೋಡುಗರ ಕಣ್ಮನ ಸೆಳೆಯಿತು.. 

ಉತ್ತರ ಕರ್ನಾಟಕ ಜಾನಪದ ಕಲೆಗಳಾದ “ಕರಡಿ ಮಜಲು” “ನವಿಲು ಕುಣಿತ” “ಡೊಳ್ಳು ಕುಣಿತ” ನೆರೆದಿದ್ದ ಜನತೆಗೆ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿತು…

ಸಂಘದ ಅಧ್ಯಕ್ಷರಾದ ಸಿದ್ದು ನ್ಯಾಮಗೌಡ, ಶ್ರೀಕಾಂತ ಕುಲಕರ್ಣಿ, ಜಿ ಎಸ್ ನ್ಯಾಮಗೌಡ, ರಾಕೇಶ ಲಾಡ, ವಿನೋದ ಲೋಣಿ, ಮುತ್ತಿನಕಂತಿ ಮಠದ ಸ್ವಾಮಿಗಳು ಮತ್ತು ನಗರದ ಗಣ್ಯ ವ್ಯಕ್ತಿಗಳು ಹಾಜರಿದ್ದರು… 

ಪ್ರಸನ್ನ ಮ ಔರಸಂಗ


Comments