UK Suddi
The news is by your side.

ಪರಾರಿಯಾಗಿದ್ದ ಸಿಮಿ ಉಗ್ರರ ಎನ್ ಕೌಂಟರ್

bhpal-story

ಭೋಪಾಲ್: ಜೈಲಿನಿಂದ ಪರಾರಿಯಾಗಿದ್ದ ಎಂಟು ಮಂದಿ ಸಿಮಿ ಉಗ್ರರನ್ನು ಮಧ್ಯಪ್ರದೇಶ ಭೋಪಾಲ್ ನ ಇಂತಕೇಡಿ ಬಳಿ ಪೊಲೀಸರು ಗುಂಡಿಟ್ಟು ಹತ್ಯೆಗೈದಿದ್ದಾರೆ.

ಭೋಪಾಲ್ ನ ಕೇಂದ್ರ ಕಾರಾಗೃಹದಿಂದ ಸೋಮವಾರ ಬೆಳಗ್ಗಿನ ಜಾವ 3.30ರವೇಳೆಗೆ ಜೈಲಿನ ಪೇದೆಯನ್ನು ಕೊಂದು ಬಳಿಕ ಬೆಡ್ ಶೀಟ್, ಹಗ್ಗ ಬಳಸಿ ಜೈಲಿನ ಗೋಡೆ ಹಾರಿ ಪರಾರಿಯಾಗಿದ್ದರು.

ಈ ಕುರಿತಂತೆ ಪೊಲೀಸರು ಶೀಘ್ರ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದು, ಸಿಮಿ ಉಗ್ರರನ್ನು ಹತ್ಯೆಗೈದಲ್ಲಿ ಪ್ರತಿ ಎಂಟು ತಲೆಗೂ ತಲಾ 10ಲಕ್ಷ ಬಹುಮಾನ ಘೋಷಿಸಲಾಗಿತ್ತು. ಇದೀಗ ಎಂಟು ಮಂದಿ ಕೈದಿಗಳನ್ನು ಹತ್ಯೆಗೈಯುವ ಮೂಲಕ ಪೊಲೀಸರ ಕಾರ್ಯಾರಣೆ ಯಶಸ್ವಿಯಾಯಿತು.

Comments