ಬೈಕ್ ತೊಳೆಯಲು ತೆರಳಿದ ಬಾಲಕ ನೀರು ಪಾಲು
ಹಾವೇರಿ: ಬೈಕ್ ತೊಳೆಯಲು ಹೋದ 11 ವರ್ಷದ ಬಾಲಕ ನೀರುಪಾಲಾಗಿರುವ ಘಟನೆ ರಾಣೆಬೇನ್ನೂರ ತಾಲೂಕಿನ ಹಲಗೆರೆ ಗ್ರಾಮದ ತುಂಗಭದ್ರಾ ಕಾಲುವೆಯಲ್ಲಿ ನಡೆದಿದೆ.
ಕುರಬಗೆರಿಯ ನಿವಾಸಿ ವಿನಾಯಕ ಶಂಕ್ರಪ್ಪ ಹುಲಗಮ್ಮನವರ ಬೈಕ್ ತೊಳೆಯಲು ತಂದೆ ಮಗ ಕಾಲುವೆಗೆ ಹೋಗಿದ್ದರು. ಈ ವೇಳೆ ಬಾಲಕ ಕಾಲು ಜಾರಿ ನೀರಿನಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಇವರು ಸಂಬಂಧಿಕರ ಮನೆಗೆ ದೀಪಾವಳಿ ಹಬ್ಬಕ್ಕೆ ಹೋಗಿದ್ದರು ಎನ್ನಲಾಗಿದ್ದು, ಬಾಲಕನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತು.