ಶಬ್ದ ಗಾರುಡಿಗ ಸಿದ್ದು ದಿವಾಣ ಅವರ ರಚನೆ
ಕನ್ನಡತಿ ನಮ್ಮವ್ವ
○○○○○○○○○○○○
ಕನ್ನಡತಿ ನಮ್ಮವ್ವ ಹಡದವ್ವ ಕನ್ನಡತಿ
ಕನ್ನಡದ ನುಡಿಯಲ್ಲಿ ನಂಬೆಳಕು ಕೀರ್ತಿ
ಚಾಲುಕ್ಯದುಡಿಯಲ್ಲಿ ಬೇಲೂರು ಶಿಲೆಯಲ್ಲಿ
ಕನ್ನಡದ ನುಡಿಮುತ್ತು ಉಲಿದಾವ ಇಲ್ಲಿ
ಕಲ್ಯಾಣದ ಅನುಭಾವ ವಚನ ವಾಙ್ಮಯದಲ್ಲಿ
ಹಂಪೆಯ ವಿರುಪಾಕ್ಷನ ವಿಜಯ ವೈಭವದಲ್ಲಿ
ಶೃಂಗೇರಿ ಶಾರದೆಯ ಕಂಠದೈಸಿರಿಯಲ್ಲಿ
ಚೆನ್ನುಡಿಯು ಕನ್ನುಡಿಯ ಬೆಳಕು ಹೊಂಬೆಳಕಲ್ಲಿ
ಕಾವೇರಿಯ ಕೃಷಿಯಲ್ಲಿ ಬದುಕಿನೈಸಿರಿಯಲ್ಲಿ
ಶರಾವತಿಯ ಬೆಳಕಿನಲ್ಲಿ ಹಸಿರು ಚಫ್ಪರದಲ್ಲಿ
ಬೆಳವಲದ ಕೃಷ್ಣೆಯ ಸಂಸೃತಿಯ ಸೊಬಗಿನಲ್ಲಿ
ಕನ್ನಡಮ್ಮನ ಎದೆಹಾಲು ಭಾಷೆ ನುಡಿಗಂಧ ಇಲ್ಲಿ
ಕಿತ್ತೂರು ಖಡ್ಗದಲಿ ಓಬವ್ವನೊನಕೆಯಲಿ
ಪುಲಿಕೇಶಿ ಶೌರ್ಯದಲಿ ಗಟ್ಟಿ ಕನ್ನಡವಿಲ್ಲಿ
ಶ್ರೀದೇವಿ ಚಾಮುಂಡಿ ಶಕ್ತಿಗನ್ನಡವಿಲ್ಲಿ
ದಿನವಾಣಿ ಜನವಾಣಿ ನಿತ್ಯ ನುಡಿಗನ್ನಡ ಇಲ್ಲಿ
ಸಣ್ಣಾಟ ದೊಡ್ಡಾಟ ಪಾರಿಜಾತದ ಕಲೆಯಲ್ಲಿ
ಜಾನಪದ ಝೇಂಕಾರ ಯಕ್ಷಗಾನ ಸಿರಿಯಲ್ಲಿ
ಕವಿರನ್ನ ಬೆಳೆಸಿರುವ ಸಿದ್ದರಾಮ ನುಡಿಯಲ್ಲಿ
ಇಂಪಾದ ಸೊಂಪಾದ ಮಧುರಗನ್ನಡ ಇಲ್ಲಿ..
ಸಂಗ್ರಹಣೆ : ಪ್ರಸನ್ನ ಮ ಔರಸಂಗ