UK Suddi
The news is by your side.

ದೊಡವಾಡದಲ್ಲಿ ಅದ್ದೂರಿ ಕರ್ನಾಟಕ ರಾಜ್ಯೋತ್ಸವ ಆಚರಣೆ..

ದೊಡವಾಡದಲ್ಲಿ ಅದ್ದೂರಿ ಕರ್ನಾಟಕ ರಾಜ್ಯೋತ್ಸವ ಆಚರಣೆ…

ಬೈಲಹೊಂಗಲ: ತಾಲೂಕಿನ ದೊಡವಾಡ ಗ್ರಾಮದಲ್ಲಿ ಸಮಸ್ತ ಕನ್ನಡಪರ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಆಯೊಜೀಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಸದಸ್ಯ ಶ್ರೀ ಶಂಕರ ಮಾಡಲಗಿ ಉದ್ಘಾಟಿಸಿ ಮಾತನಾಡಿದ ಅವರು ಯುವ ಜನತೆ ಕನ್ನಡ ನಾಡು-ನುಡಿ,ನೆಲ-ಜಲ, ಬಾಷೆ, ಸಂಸ್ಕೃತಿ ಉಳಿಸಿ ಬೆಳೆಸಬೇಕೆಂದು ಅವರು ಹೇಳಿದರು. ವಕೀಲರಾದ ಶ್ರೀ ವಿಜಯಕುಮಾರ್ ಅಲಸಂದಿ ಪ್ರಾಸ್ತಾವಿಕ ಭಾಷಣ ಮಾಡಿದರು.ಇದೇ ಸಂದರ್ಭದಲ್ಲಿ ಸಚಿನ ಅರಬಳ್ಳಿ, ಶಿಕ್ಷಕರಾದ ಕೆ.ಬಿ.ಕಡೆಮನಿ,ಸುಷ್ಮಾ ಕುಲಕರ್ಣಿ ಅವರಿಂದ ಸಂಗೀತ ಸಂಜೆ ಹಾಗು ವಿವಿದ ಸಾಂಸ್ಕ್ರತಿಕ ಕಾರ್ಯಕ್ರಮಗಳು ವೀಜೃಂಬನೆಯಿಂದ ಜರುಗಿದವು. ತಾ ಪಂ ಸದಸ್ಯ ಶ್ರೀ ಸಂಗಯ್ಯ ಧಾಬಿಮಠ,ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಶ್ರೀ ಪರಪ್ಪ ಚವಡನ್ನವರ,ಜನತಾ ವಿದ್ಯಾ ಪ್ರಸಾರಕ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಶ್ರೀಕಾಂತ್ ವನಹಳ್ಳಿ ಹಾಗು ದೊಡವಾಡ ಗ್ರಾಮದ ಸಮಸ್ತ ಗುರು ಹಿರಿಯರು ಉಪಸ್ಥಿತರಿದ್ದರು.ಸಂಗಮೇಶ್ ಹಂಚಗಿ ನಿರೂಪಣೆ ಮಾಡಿದರು..

-ಗುರು ಎ…

Comments