UK Suddi
The news is by your side.

ಕುಂದಗೋಳದಲ್ಲಿ ಸಂಸದರಿಂದ ಜನ ಸಂಪರ್ಕ ಸಭೆ.

 ಕುಂದಗೋಳದಲ್ಲಿ  ಸoಸದರಾದ ಶ್ರೀ ಪ್ರಲ್ಹಾದ ಜೋಶಿ  ಅವ್ರು  ನಡೆಸಿದ  ಜನ ಸಂಪರ್ಕ  ಸಭೆಯಲ್ಲಿ ರೈತರ ಸಮಸ್ಯೆ ಮತ್ತು ಆಡಳಿತ ಸಂಬಂಧ ಪಟ್ಟ ವಿಷಯಗಳನ್ನು ಚರ್ಚಿಸಲಾಯಿತು. ಇದರಲ್ಲಿ ಪ್ರಮುಖವಾಗಿ ಬೆಳೆ ವಿಮೆ, ಬೆಳೆ ಹಾನಿ ಹಾಗೂ ಬರಗಾಲ ಪರಿಸ್ಥಿತಯ ಬಗ್ಗೆ ಚರ್ಚಿಸಲಾಯಿತು. ಗುಡಗೇರಿ, ಯಲಿವಾಳ, ಸೌಂಶಿ ಹಾಗೂ ಕುಂದಗೋಳದಲ್ಲಿ ಗೊ-ಶಾಲೆಗಳನ್ನು ನಿರ್ಮಾಣ ಮಾಡಲು ನಿರ್ಧರಿಸಲಾಯಿತು. ಹಾಗೂ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮರ್ಪಕ ಸರಬರಾಜು ಮಾಡುವಂತೆ ತಹಶಿಲ್ದಾರ ಇವರಿಗೆ ತಿಳಿಸಲಾಯಿತು.

-ಗುರು ಎ..

Comments