UK Suddi
The news is by your side.

ಮಾಸ್ತಿಗುಡಿ ಚಿತ್ರ ತಂಡದ ವಿರುದ್ಧ ಎಫ್‍ಐಆರ್ ದಾಖಲು

anil-and-uday-jpg-pagespeed-ce-rbdbjve-ds

ಬೆಂಗಳೂರು: ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಸಂಭವಿಸಿ ಖಳನಟರಾದ ಅನಿಲ್ ಮತ್ತು ಉದಯ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತಾವರೆಕೆರೆ ಠಾಣೆಯಲ್ಲಿ ಯವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಜಲಾಶಯದಲ್ಲಿ ನಡೆದ ದುರಂತ ಸಂಬಂಧ ಚಿತ್ರತಂಡದ ವಿರುದ್ಧ ತಾವರೆಕೆರೆ ಠಾಣೆಗೆ ದೂರು ಜಲಮಂಡಳಿ ದೂರು ನೀಡಿದ್ದು, ಶೂಟಿಂಗ್ ನಮ್ಮ ಷರತ್ತು ಮೀರಿ ನಡೆದಿತ್ತು ಎಂದು ಆರೋಪಿಸಲಾಗಿದೆ. ಪೊಲೀಸರು ಐಪಿಸಿ ಸೆಕ್ಷನ್ 188,304,34 ಅಡಿ ಚಿತ್ರ ತಂಡದ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮೊದಲ ಆರೋಪಿಯಾಗಿ ಚಿತ್ರದ ನಿರ್ಮಾಪಕ ಸುಂದರ್ ಗೌಡ, 2ನೇ ಆರೋಪಿಯಾಗಿ ನಿರ್ದೇಶಕ ನಾಗಶೇಖರ್, 3ನೇ ಆರೋಪಿಯಾಗಿ ಸಹನಿರ್ದೇಶಕ ಸಿದ್ದು, 4ನೇ ಆರೋಪಿಯಾಗಿ ರವಿವರ್ಮಾ, ಯೂನಿಟ್ ಮ್ಯಾನೇಜರ್ ಭರತ್ ಇತರರ ಹೆಸರು ಎಫ್‍ಐಆರ್‍ನಲ್ಲಿದೆ.

ಮಾಗಡಿ ಸಮೀಪದ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಒಂದು ದಿನದ ಮಟ್ಟಿಗೆ ಶೂಟಿಂಗ್ ನಡೆಸಲು ಅನುಮತಿ ನೀಡುವಂತೆ ಜಲಮಂಡಳಿಗೆ ಚಿತ್ರ ತಂಡ ಕೇಳಿಕೊಂಡಿತ್ತು. ಈ ಮನವಿಯನ್ನು ಪುರಸ್ಕರಿಸಿದ ಜಲಮಂಡಳಿ ನ.7ರಂದು ಶೂಟಿಂಗ್ ನಡೆಸಲು ನ.4ರಂದು ಅನುಮತಿ ನೀಡಿತ್ತು.

ಈ ವೇಳೆ ನಿಷೇಧಿತ ಪ್ರದೇಶದಲ್ಲಿ ಚಿತ್ರೀಕರಣ ನಡೆಸಬಾರದು. ಏರಿಯಲ್ ಶಾಟ್‍ಗಳಿಗೆ ಈ ಅನುಮತಿ ಅನ್ವಯವಾಗುವುದಿಲ್ಲ. ಮಂಡಳಿಯ ದೈನಂದಿನ ಕಾರ್ಯಗಳಿಗೆ ಯಾವುದೇ ಅಡಚಣೆ ಉಂಟಾಗಬಾರದು. ಜಲಮಂಡಳಿಯ ಯಾವುದೇ ಆಸ್ತಿಗೆ ಧಕ್ಕೆಯಾಗದಂತೆ ಚಿತ್ರೀಕರಿಸುವುದು. ಮಂಡಳಿ ಆಸ್ತಿಗೆ ಧಕ್ಕೆಯಾದಲ್ಲಿ ನಷ್ಟದ ಪೂರ್ತಿ ಹಣವನ್ನು ಸಂಸ್ಥೆಯವರು ಭರಿಸತಕ್ಕದ್ದು. ಮಂಡಳಿಯ ಸ್ಥಳದಲ್ಲಿ ಸ್ವಚ್ಛತೆ ಕಾಪಾಡುವುದು ಎಂದು ಷರತ್ತನ್ನು ವಿಧಿಸಿ ಜಲಮಂಡಳಿ ಅನುಮತಿ ನೀಡಿತ್ತು.

ಷರತ್ತು ಉಲ್ಲಂಘನೆ:
ಚಿತ್ರದ ಶೂಟಿಂಗ್ ವೇಳೆ ಜಲಮಂಡಳಿ ಎಇಇ ಇಂಜಿನಿಯರ್ ಅವರನ್ನು ಶೂಟಿಂಗ್ ಸ್ಥಳಕ್ಕೆ ಕಳುಹಿಸಿತ್ತು. ಶೂಟಿಂಗ್ ಮುಗಿದಿದೆ ಎಂದು ಚಿತ್ರ ತಂಡ ತಿಳಿಸಿದ ಹಿನ್ನೆಲೆಯಲ್ಲಿ ಅಧಿಕಾರಿಯವರು ಜಲಾಶಯದಿಂದ ತೆರಳಿದ್ದರು. ಆದರೆ ಚಿತ್ರತಂಡ ಅಧಿಕಾರಿ ತೆರಳಿದ ಮೇಲೆ ಷರತ್ತನ್ನು ಉಲ್ಲಂಘಿಸಿ ಹೆಲಿಕಾಪ್ಟರ್ ಮೂಲಕ ಸ್ಟಂಟ್ ಮಾಡಿದ ಕಾರಣ ದುರಂತ ಸಂಭವಿಸಿದೆ.

ಶೂಟಿಂಗ್ ನಿಷೇಧಿಸಿದ್ದು ಯಾಕೆ?
2014 ರಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಮುಳುಗಿ ಐವರು ಮೃತಪಟ್ಟಿದ್ದರು. ಅಲ್ಲದೇ ಪ್ರತಿ ಭಾನವಾರ ಪಿಕ್‍ನಿಕ್‍ಗೆ ಬಂದು ಪ್ರವಾಸಿಗರು ಸಾವನ್ನಪ್ಪುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಪ್ರವೇಶ ನಿರ್ಬಂಧಕ್ಕೆ ಮನವಿ ಮಾಡಿದ್ದರು. ಸರ್ಕಾರ 2014 ರಿಂದಲೇ ತಿಪ್ಪಗೊಂಡನಹಳ್ಳಿ ಪ್ರದೇಶಕ್ಕೆ ನಿಷೇಧ ಹೇರಿತ್ತು. ಬಳಿಕ ಅನುಮತಿ ಇಲ್ಲದೆ ಕೆರೆಗೆ ಪ್ರವೇಶಿಸದಂತೆ ನಿಷೇಧ ಹೇರಲಾಗಿತ್ತು.

Comments