UK Suddi
The news is by your side.

ರಾಷ್ಟ್ರೀಯ ತಂಡಕ್ಕೆ ಮರಳಬೇಕಾದರೆ ಫಿಟ್ನೆಸ್ ಟೆಸ್ಟ್ ಕಡ್ಡಾಯ

Kolkata: Cricketers warm up during their fitness Test at Eden Garden in Kolkata on Saturday ahead of the Bangladesh tour. PTI Photo by Swapan Mahapatra (PTI6_6_2015_000192B)
ರಾಜ್ ಕೋಟ್: ದೇಶೀಯ ಕ್ರಿಕೆಟ್ ಆಟಗಾರರು ರಾಷ್ಟ್ರೀಯ ತಂಡಕ್ಕೆ ಮರಳಬೇಕಾದಲ್ಲಿ ಫಿಟ್ನೆಸ್ ಟೆಸ್ಟ್ ಕಡ್ಡಾಯ ಎಂದು ಟೀಂ ಇಂಡಿಯಾದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಸೋಮವಾರದಂದು ಹೇಳಿದ್ದಾರೆ.

ಟೀಂ ಇಂಡಿಯಾ ತಂಡದಲ್ಲಿ ಪ್ರಮುಖ ಆಟಗಾರರು ಗಾಯದಿಂದಾಗಿ ಹೊರುಗಳಿದಿದ್ದಾರೆ. ಆದರೆ, ಅವರನ್ನು ಆಯ್ಕೆಗೆ ಪರಿಗಣಿಸುವ ಮುನ್ ಫಿಟ್ನೆಸ್ ಟೆಸ್ಟ್ ನಲ್ಲಿ ಯಶಸ್ಸು ಕಾಣುವುದರೊಂದಿಗೆ ದೇಶೀಯ ಕ್ರಿಕೆಟ್ ನಲ್ಲೂ ಆಡಿರಬೇಕು ಎಂದು ವಿವರಿಸಿದ್ದಾರೆ. ಸದ್ಯ ರೋಹಿತ್ ಶರ್ಮಾ, ಕೆಎಲ್ ರಾಹುಲ್, ಶಿಖರ್ ಧವನ್ ಹಾಗೂ ವೇಗಿ ಭುವನೇಶ್ವರ್ ಗಾಯದ ಕಾರಣ ತಂಡದಿಂದ ಹೊರಗಿದ್ದಾರೆ. ಇದರಲ್ಲಿ ಭುವನೇಶ್ವರ್ ಕುಮಾರ್ ಚೇತರಿಸಿಕೊಂಡಿದ್ದಾರೆ. ಆದರೆ ಇಂಗ್ಲೆಂಡ್ ಸರಣಿಗೆ ತಂಡವನ್ನು ಆಯ್ಕೆ ಮಾಡುವ ವೇಳೆ ಭುವನೇಶ್ವರ್ ಯಾವುದೇ ದೇಶೀಯ ಕ್ರಿಕೆಟ್ ಪಂದ್ಯ ಆಡಿರದ ಕಾರಣ ಅವರನ್ನು ತಂಡಕ್ಕೆ ಪರಿಗಣಿಸಿರಲಿಲ್ಲವಾಗಿತ್ತು.

Comments