ಶನಿವಾರ, ಭಾನುವಾರ ಬ್ಯಾಂಕ್ ಗಳು ಬಂದ್ ಇರಲ್ಲ
ನವದೆಹಲಿ/ ಮುಂಬೈ: ಕೇಂದ್ರ ಸರ್ಕಾರವು ಹಳೆಯ 500 ರೂಪಾಯಿ ಮತ್ತು 1000 ರೂಪಾಯಿ ಮುಖಬೆಲೆಯ ಕರೆನ್ಸಿ ನೋಟುಗಳನ್ನು ರದ್ದು ಪಡಿಸಿರುವ ಹಿನ್ನೆಲೆಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಎಲ್ಲ ಬ್ಯಾಂಕುಗಳು ನವೆಂಬರ್ 12ರ ಶನಿವಾರ ಮತ್ತು ನವೆಂಬರ್ 13ರ ಭಾನುವಾರ ಕಾರ್ಯ ನಿರ್ವಹಿಸಲಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಬುಧವಾರ ಪ್ರಕಟಿಸಿದೆ.
ಮಂಗಳವಾರ ಮಧ್ಯರಾತ್ರಿಯಿಂದ 500 ರೂ. ಮತ್ತು 1000 ರೂ. ಮುಖಬೆಲೆಯ ಹಳೆಯ ಕರೆನ್ಸಿ ನೋಟುಗಳನ್ನು ರದ್ದು ಪಡಿಸಿದ್ದು, 500 ರೂಪಾಯಿ ಮತ್ತು 2000 ರೂಪಾಯಿಗಳ ಹೊಸ ಕರೆನ್ಸಿ ನೋಟು ನ.10ರಿಂದ ಚಾಲ್ತಿಗೆ ಬರಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದರು.
ನ.9. 10,11ರಂದು ಎಲ್ಲ ಬ್ಯಾಂಕ್, ಎಟಿಎಂಗಳು ಕಾರ್ಯ ನಿರ್ವಹಿಸುವುದಿಲ್ಲ ಎಂದೂ ಕೇಂದ್ರ ಸರ್ಕಾರ ಪ್ರಕಟಿಸಿತ್ತು.