UK Suddi
The news is by your side.

ಸಾವಿರ ನೋಟು – ಸಿದ್ದು ದಿವಾಣ ಅವರ ಕವಿತೆ 

ಸಾವಿರ  ನೋಟು

———————

ಸಾವಿರ  ನೋಟಿಗೆ ಸಾವಿರದು ಸುಳ್ಳಾಯ್ತು

ಐನೂರು ನೋಟು ಬದಲಾಯ್ತು  ! ಸಿದ್ದರಾಮ

ಸಾವ್ಕಾರ್ನ  ಲೆಕ್ಕ ಬಯಲಾಯ್ತು
ಸಾವಿರ ಮಂದ್ಯಾಗ  ಸರದಾರ  ಮೆರದಾಡಿ

ಸಾವಿರ  ನೋಟು  ಸ್ವರ್ಗಕ್ಕೆ  ! ಸಿದ್ದರಾಮ

ಐನೂರು ನೋಟು ಮುಪ್ಪಾಯ್ತು
ಸಾವಿರ  ನೋಟಿನ ಗೆಳೆತನ  ಮುಳುವಾಯ್ತು

ಸಾವ್ಕಾರ್ಕಿ  ನಸೀಬ ಕೆಟ್ಹೋಯ್ತು  ! ಸಿದ್ದರಾಮ

ಸಾವಿರದ ಬೆಳಕು ತಿಳಿದೋಯ್ತು

■ ಡಾ.ಸಿದ್ದು ರಾ ದಿವಾಣ

fb_img_1478107966423.jpg

Comments