UK Suddi
The news is by your side.

ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ: ಎಂಎಲ್ಸಿ ಪಾರು


ವಿಜಯಪುರ: ನಗರದ ಗಾಂಧಿ ಚೌಕ್ ಬಳಿ ಎಂಎಲ್ಸಿ ಅರುಣ್ ಶಹಾಪುರ ಅವರು ಪ್ರಯಾಣಿಸುತ್ತಿದ್ದ ಸ್ಕಾರ್ಪಿಯೋ ಕಾರಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ವರದಿಯಾಗಿದೆ.

ಈ ಘಟನೆಯಲ್ಲಿ ಎಂಎಲ್ಸಿ ಅರುಣ್ ಶಹಾಪುರ ಅವರು ಪಾರಾಗಿದ್ದು, ಯಾವುದೇ ಗಾಯಗಳಾದ ವರದಿಯಾಗಿಲ್ಲ.

ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದು, ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments