ಟಿಪ್ಪು ಜಯಂತಿ ವೇಳೆ ನಗ್ನ ಚಿತ್ರ ವೀಕ್ಷಿಸುತ್ತಿದ್ದ ಸಚಿವ ತನ್ವೀರ್ ಸೇಠ್
ರಾಯಚೂರು : ಇಲ್ಲಿ ನ ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಒಂದೆಡೆ ಟಿಪ್ಪು ಸುಲ್ತಾನ್ ಕುರಿತಾಗಿ ಉಪನ್ಯಾಸ ನಡೆಯುತ್ತಿದ್ದರೆ ನನಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ವೇದಿಕೆಯ ಮೇಲೆ ಆಸೀನರಾಗಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಯುವತಿಯರ ಅರೆ ನಗ್ನ ಚಿತ್ರಗಳನ್ನು ವೀಕ್ಷಿಸುತ್ತಿದ್ದುದು ಮಾಧ್ಯಮಗಳ ಕ್ಯಾಮಾರದಲ್ಲಿ ಸೆರೆಯಾಗಿದೆ.
ಮಾಧ್ಯಮಗಳ ಕ್ಯಾಮಾರಾದಲ್ಲಿ ಸಚಿವರ ಕೀಳು ವರ್ತನೆ ಸೆರೆಯಾಗಿದ್ದು ಕ್ಯಾಮರಾ ಕಂಡೊಡನೆಯೇ ಸಚಿವರು ಮೊಬೈಲ್ ಸ್ಕ್ರೀನ್ ಕ್ಲೋಸ್ ಮಾಡಿದ್ದಾರೆ.ಅರೆನಗ್ನ ಹಾಟ್ ಬೆಡಗಿಯ ನಾಲ್ಕೈದು ಭಾವಚಿತ್ರಗಳನ್ನು ತದೇಕ ಚಿತ್ತದಿಂದ ವೀಕ್ಷಿಸಿರುವುದು ಕ್ಯಾಮಾರದಲ್ಲಿ ಸೆರೆಯಾಗಿದೆ.
ಮೊದಲೇ ಟಿಪ್ಪು ಜಯಂತಿ ಆಚರಣೆಯ ಬಗ್ಗೆ ಆಕ್ರೋಶ ಹೊಂದಿರುವ ಬಿಜೆಪಿ ಮುಖಂಡರು ಸಚಿವರ ಈ ನಡವಳಿಕೆಯಿಂದ ಇನ್ನಷ್ಟು ಆಕ್ರೋಶಗೊಂಡಿದ್ದಾರೆ. ಸಚಿವರಾಗಿ ಸಾರ್ವಜನಿಕವಾಗಿ ಬೇವಾಬ್ಧಾರಿ ವರ್ತನೆ ತೋರಿದ ತನ್ವೀರ್ ಸೇಠ್ ಅವರು ಕೂಡಲೇ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷ ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.
ರಾಜ್ಯದೆಲ್ಲೆಡೆ ಬಿಜೆಪಿ ಮತ್ತು ಕೆಲ ಸಂಘಟನೆಗಳ ಪ್ರತಿಭಟನೆ ಹೊರತು ಪಡಿಸಿ ಯಾವುದೇ ಅಹಿತಕರ ಘಟನೆ ಗಳಿಲ್ಲದೆ ಶಾಂತಿಯುತವಾಗಿ ಟಿಪ್ಪು ಜಯಂತಿ ನಡೆದಿದ್ದು ಸಚಿವರ ನಗ್ನ ಚಿತ್ರ ವೀಕ್ಷಣೆ ಮಾಧ್ಯಮಗಳಲ್ಲಿ ಭಾರಿ ದೊಡ್ಡ ಸುದ್ದಿಯಾಗುವ ಮೂಲಕ ವಿವಾದಕ್ಕೆ ನಾಂದಿ ಹಾಡಿದೆ.
ಫೋಟೋ, ವಿಡಿಯೋ ಕೃಪೆ : ಟಿವಿ9 ಕನ್ನಡ , ಉದಯವಾಣಿ