UK Suddi
The news is by your side.

ಒಂದು ನೋಟು ಪ್ರಿಂಟ್ ಮಾಡೋಕೆ ಎಷ್ಟು ಖರ್ಚಾಗುತ್ತೆ?

ಬೆಂಗಳೂರು: ಹಳೆ ನೋಟುಗಳನ್ನು ವಾಪಸ್ ಪಡೆದು ಹೊಸ ನೋಟು ಮಾರುಕಟ್ಟೆಗೆ ಬರುವಾಗಲೆಲ್ಲಾ ಹುಟ್ಟಿಕೊಳ್ಳುವ ಕುತೂಹಲಕಾರಿ ಪ್ರಶ್ನೆ ಎಂದರೆ ಒಂದು ನೋಟು ಪ್ರಿಂಟ್ ಮಾಡೋದಕ್ಕೆ ಎಷ್ಟು ಖರ್ಚು ಆಗುತ್ತೆ ಅನ್ನೋದು. ಅದರ ಲೆಕ್ಕಾಚಾರ ಹೀಗಿದೆ.

5 ರೂ. ಮುಖಬೆಲೆಯ ಒಂದು ನೋಟು ಪ್ರಿಂಟ್ ಮಾಡೋಕೆ 0.48 ಪೈಸೆ ವೆಚ್ಚವಾಗುತ್ತದೆ.

ಹಾಗೆ 10 ರೂ ನೋಟಿಗೆ 0.96 ಪೈಸೆ ಆಗುತ್ತದೆ.

20 ರೂ ನೋಟಿಗೆ 1.5 ರೂ.

50 ರೂ ನೋಟಿಗೆ 1.81 ರೂ.

100 ರೂ ನೋಟಿಗೆ 1.79 ರೂ.

500 ರೂ ನೋಟಿಗೆ 2.5 ರೂ.

1000 ರೂ ನೋಟಿಗೆ 3.17 ರೂ. ಮುದ್ರಣಾ ವೆಚ್ಚ ತಗುಲುತ್ತದೆ.

 

2014-15ರ ಅವಧಿಯಲ್ಲಿ 500, 1000 ರೂ. ನೋಟುಗಳ ಮುದ್ರಣಕ್ಕೆ ಆಗಿರುವ ಒಟ್ಟು ವೆಚ್ಚ- 2,770 ಕೋಟಿ ರೂಪಾಯಿ. ಸದ್ಯ 5 ರೂಪಾಯಿ ನೋಟು ಮುದ್ರಣವಾಗುತ್ತಿಲ್ಲ. ಅದರ ಬದಲಿಗೆ ಅದೇ ಮುಖಬೆಲೆಯ ನಾಣ್ಯವನ್ನು ಟಂಕಿಸಲಾಗುತ್ತಿದೆ. ವಿಶೇಷ ಅಂದ್ರೆ ಈ ಹಿಂದೆ ಮುದ್ರಣವಾಗಿದ್ದ 5 ರೂಪಾಯಿ ನೋಟನ್ನು ಆರ್‍ಬಿಐ ಹಣದ ಮಾರುಕಟ್ಟೆಯಿಂದ ಹಿಂಪಡೆದಿಲ್ಲ.

Comments