ಜಪಾನಿನಲ್ಲಿ 6.2 ಪ್ರಮಾಣದ ಭೂ ಕಂಪನ
ಜಪಾನ್: ದೇಶದ ಪೂರ್ವ ಕರಾವಳಿಯಲ್ಲಿ 6.2 ಪ್ರಮಾಣದ ಭೂ ಕಂಪನ ಉಂಟಾಗಿದ್ದು, ಈ ಪ್ರದೇಶವು ಟೊಕಿಯಿದಿಂದ 250 ಮೈಲಿ ದೂರವಿದ್ದು, ಇಶಿನೋಮಕಿ ಎಂಬಲ್ಲಿ ವರದಿಯಾಗಿದೆ.
ಜಿಯೋಲಾಜಿಕಲ್ ದತ್ತಾಂಶದ ಪ್ರಕಾರ, ಕಂಪನವು 28 ಮೈಲಿ ಆಳದಲ್ಲಿ ಉಂಟಾಗಿದೆ. 2011 ರಲ್ಲಿ ನಡೆದ ಯೊಹೊಕು ಭೂ ಕಂಪನದಲ್ಲಿ ಸಾವಿರ ಜೀವಗಳು ಸತ್ತ ವರದಿಯಾಗಿತ್ತು.
ಇಹಿಮೆಯಲ್ಲಿರುವ ಇಕಾತಾ ಪರಮಾಣು ವಿದ್ಯುತ್ ಸ್ಥಾವರದಲ್ಲಿಯೂ ಕಂಪನ ಉಂಟಾದ ವರದಿಯಾಗಿದೆ. ಪೆಸಿಫಿಕ್ ಸುನಾಮಿ ಸೂಚನಾ ಕೇಂದ್ರವು, ಸುನಾಮಿ ಸಂಭವಿಸುವ ಕುರಿತು ಯಾವುದೇ ಎಚ್ಚರಿಕೆಯ ಮುನ್ಸೂಚನೆ ನೀಡಿಲ್ಲ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.