ಬನಹಟ್ಟಿ: ಅಶ್ಲೀಲ ಚಿತ್ರ ವಿಕ್ಷಿಸಿದ ತನ್ವೀರ್ ಶೇಠ್ ರಾಜಿನಾಮೆಗೆ ವತ್ತಾಯ
ಬನಹಟ್ಟಿ: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ತನ್ವೀರ್ ಶೇಠ್ ರಾಯಚೂರಿನಲ್ಲಿ ನಡೆದ ಟಿಪ್ಪು ಜಯಂತಿ ಸಂದರ್ಭದಲ್ಲಿ ಅಶ್ಲೀಲ ಚಿತ್ರವನ್ನು ವೀಕ್ಷಿಸುದನ್ನು ಖಂಡಿಸಿ ರಬಕವಿ ಬನಹಟ್ಟಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸದಶ್ಯರು ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ಇಂದು ಶಾಲಾ ಬಾಲಕಿಯರ ಮೇಲೆ ದೌರ್ಜನ್ಯ ಹಾಗೂ ಅತ್ಯಾಚಾರ ಹೆಚ್ಚಾಗಿದ್ದು, ಅವುಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಬಿಟ್ಟು ಈ ರೀತಿ ವರ್ತಿಸಿರುವುದರಿಂದ ತಕ್ಷಣವೇ ರಾಜಿನಾಮೆ ನೀಡಬೇಕು ಎಂದು ವತ್ತಾಯಿಸಿದರು.