ಮಾಸ್ತಿ ಗುಡಿ ದುರಂತ: ನಿರ್ದೇಶಕ ನಾಗಶೇಖರ್, ರವಿವರ್ಮಾ ಪೊಲೀಸರಿಗೆ ಶರಣು
ರಾಮನಗರ: ಮಾಸ್ತಿ ಗುಡಿ ದುರಂತ ಪ್ರಕರಣ ಸಂಬಂಧ ಚಿತ್ರ ನಿರ್ದೇಶಕ ನಾಗಶೇಖರ್ ಮತ್ತು ಸಾಹಸ ನಿರ್ದೇಶಕ ರವಿವರ್ಮಾ ಮಾಗಡಿ ಪೊಲೀಸರಿಗೆ ಶನಿವಾರದಂದು ಶರಣಾಗಿದ್ದಾರೆ.
ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಖಳನಟರಾದ ರಾಘವ್ ಉದಯ್ ಮತ್ತು ಅನಿಲ್ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಹೆಲಿಕಾಪ್ಟರ್ ನಿಂದ ಹಾರಿ ಪ್ರಾಣ ಕಳೆದುಕೊಂಡಿದ್ದರು. ಈ ದುರಂತ ಸಂಬಂಧ ಚಿತ್ರದ ನಿರ್ಮಾಪಕ ಸುಂದರ್ ಪಿ ಗೌಡ, ನಿರ್ದೇಶಕ ನಾಗಶೇಖರ್, ಸಾಹನ ನಿರ್ದೇಶಕ ರವಿವರ್ಮಾ, ಸಹ ನಿರ್ದೇಶಕ ಸಿದ್ದು, ಯೂನಿಟ್ ಮ್ಯಾನೇಜರ್ ಭರತ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ಈಗಾಗಲೇ ನಿರ್ಮಾಪಕ ಸುಂದರ್ ಪಿ ಗೌಡ ರಾಮನಗರ ಜೈಲಿನಲ್ಲಿದ್ದಾರೆ. ಇನ್ನು ತಲೆಮರೆಸಿಕೊಂಡಿದ್ದ ನಾಗಶೇಖರ್, ರವಿವರ್ಮಾ, ಸಿದ್ದು ಮೂವರು ಮಾಗಡಿ ಪೊಲೀಸರಿಗೆ ಇಂದು ಶರಣಾಗಿದ್ದು, ಈ ವೇಳೆ ಮಾಸ್ತಿಗುಡಿ ಚಿತ್ರದಲ್ಲಿ ಅಭಿನಯಿಸಿರುವ ನಟ ದುನಿಯಾ ವಿಜಯ್ ಸಹ ಜೊತೆಗೆ ಇದ್ದರು.