UK Suddi
The news is by your side.

ಟಿವಿ9 ವಿರುದ್ಧ ಕೇಸ್ ದಾಖಲಿಸಿದ ಸಚಿವ ತನ್ವೀರ್ ಸೇಠ್

ರಾಯಚೂರು: ರಾಯಚೂರಿನಲ್ಲಿ ಗುರುವಾರ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದ ವೇಳೆ ಶಿಕ್ಷಣ ಸಚಿವ ತನ್ವೀರ್ ಸೇಠ್ ತಮ್ಮ ಮೊಬೈಲ್ ನಲ್ಲಿ ಅಶ್ಲೀಲ ಚಿತ್ರ ನೋಡಿದ ವಿವಾದಕ್ಕೆ ಸಂಬಂಧಿಸಿದಂತೆ ಸುದ್ದಿ ಪ್ರಸಾರ ಮಾಡಿದ ಟಿವಿ9 ವಿರುದ್ಧವೇ ದೂರು ದಾಖಲಿಸಿದ್ದಾರೆ.

ಅಶ್ಲೀಲ ಚಿತ್ರ ವೀಕ್ಷಣೆ ಮಾಡಿದ್ದ ಸುದ್ದಿ ಪ್ರಸಾರ ಮಾಡಿದ ಟಿವಿ9 ಕ್ಯಾಮರಾಮನ್ ಹಾಗೂ ಟಿವಿ9 ವಿರುದ್ಧ ರಾಯಚೂರು ಪಶ್ಚಿಮ ಠಾಣೆಯಲ್ಲಿ ಸಚಿವ ತನ್ವೀರ್ ಸೇಠ್ ದೂರು ದಾಖಲಿಸಿದ್ದಾರೆ.

ಗುರುವಾರ ರಾಯಚೂರಿನಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಸಚಿವ ತನ್ವೀರ್ ಸೇಠ್ ಅವರು ಮೊಬೈಲ್ ನಲ್ಲಿ ಅರೆನಗ್ನ ಚಿತ್ರ ವೀಕ್ಷಿಸುತ್ತಿರುವುದು ದೃಶ್ಯ ಮಾಧ್ಯಮ ಸೆರೆಹಿಡಿದು ಪ್ರಸಾರ ಮಾಡಿತ್ತು. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮಿಂದ ಯಾವುದೇ ತಪ್ಪು ಸಂಭವಿಸಿಲ್ಲ, ಹಾಗಾಗಿ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಸೇಠ್ ಪ್ರತಿಕ್ರಿಯೆ ನೀಡಿದ್ದರು.

Comments