ಮೋದಿಯನ್ನು ಹೊಗಳಿದ ವಿರಾಟ್ ಕೊಹ್ಲಿ
ದೆಹಲಿ: ನೋಟುಗಳ ಮೇಲೆ ನಿಷೇಧ ಹೇರುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಿರ್ಧಾರವನ್ನು ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬುಧವಾರದಂದು ಶ್ಲಾಘಿಸಿದ್ದಾರೆ.
ನೋಟು ನಿಷೇಧ ಕುರಿತಂತೆ ಟ್ವೀಟರ್ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಭಾರತೀಯ ಇತಿಹಾಸದಲ್ಲಿಯೇ ದೊಡ್ಡ ಹೆಜ್ಜೆಯಾಗಿದೆ. ಅವರು ತೆಗೆದುಕೊಂಡಿರುವ ನಿರ್ಧಾರದಿಂದ ನಾನು ಬಹಳ ಸಂತೋಷಗೊಂಡಿರುವೆ ಎಂದಿದ್ದಾರೆ. ಇದೇ ವೇಳೆ ರಾಜ್ಕೋಟ್ ಹೋಟೆಲ್ನಲ್ಲಿ ತಮಗಾಗಿರುವ ಅನುಭವ ಹಂಚಿಕೊಂಡಿರುವ ಕೊಹ್ಲಿ, ತಮಗೆ ಅರಿವಿಲ್ಲದೆ ಹೋಟೆಲ್ನಲ್ಲಿ ಹಳೆ ನೋಟು ನೀಡಲು ಮುಂದಾಗಿದೆ. ಆದರೆ ಆ ವೇಳೆ ಅದು ಬ್ಯಾನ್ ಆಗಿದೆ ಎಂದು ತಿಳಿದು ಕ್ರೆಡಿಟ್ ಕಾರ್ಡ್ ನೀಡಿದೆ ಎಂದು ಹೇಳಿದ್ದಾರೆ. ಇದರ ಜತೆಗೆ ಭಾರತದ ಬಾಕ್ಸರ್ ಮೆರಿ ಕೊಮ್ ಸಹ ಪ್ರಧಾನಿ ಮೋದಿ ನಡೆಗೆ ಸಂತಸ ವ್ಯಕ್ತಪಡಿಸಿದ್ದಾರೆ.