UK Suddi
The news is by your side.

ಕಲುಷಿತ ನೀರಿನಿಂದ ಕಂಗೆಟ್ಟ ಸಿದ್ದಸಮುದ್ರ ಗ್ರಾಮಸ್ಥರು


ಬೆಳಗಾವಿ:ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸಿದ್ದಸಮುದ್ರ ಗ್ರಾಮದಲ್ಲಿ ಕುಡಿಯುವ ನೀರು ತುಂಬಾ ಕಲುಷಿತವಾಗಿ ಮತ್ತು ವಾಸನೆಯಿಂದ ಬರುತ್ತಿದೆ..

ಕಳೆದ ಹದಿನೈದು ದಿನಗಳಿಂದ ಈ ರೀತಿಯ ನೀರು ಸರಬರಾಜು ಆಗುತ್ತಿದೆ. ಇದರಿಂದ ಗ್ರಾಮದ ಜನರಲ್ಲಿ ಅನಾರೋಗ್ಯ ಉಂಟಾಗುತ್ತಿದೆ.

ಈ ಸಮಸ್ಯೆಯ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸರಿ ಪಡಿಸಲು ಸೂಚಿಸಿದರು ಇನ್ನುವರೆಗೆ ಯಾವದೇ ರೀತಿಯ ಪರಿಹಾರ ಸಿಕ್ಕಿಲ್ಲ ಎಂಬುದೇ ಗ್ರಾಮಸ್ಥರ ನಿತ್ಯದ ಗೋಳಾಗಿದೆ.

ಅಷ್ಟೇ ಅಲ್ಲದೆ ಸರಬರಾಜು ಮಾಡುತ್ತಿರುವ ನೀರನ್ನು ಸಹ ಸಮರ್ಪಕವಾಗಿ ಬಿಡುವದಿಲ್ಲಾ,ಕೇವಲ 5-10 ನಿಮಿಷಗಳ ಕಾಲ ಅಷ್ಟೇ ಬಿಡುವದರಿಂದ ಕೇವಲ 40-50 ಲೀಟರ್ ನೀರು ಅಷ್ಟೇ ಸರಬರಾಜು ಆಗುತ್ತಿದೆ ಎಂಬುದು ಗ್ರಾಮಸ್ಥರ ಮತ್ತೊಂದು ದೂರು ಆಗಿದೆ..

Comments