UK Suddi
The news is by your side.

ಪಕ್ಷದ ಜನಪ್ರಿಯ ಯೋಜನೆಗಳನ್ನು ಮನೆ ಮನೆಗೆ ತೆರಳಿ ತಿಳಿಸಿ:ಎಸ್ ಆರ್ ಪಾಟೀಲ.

ಬಾಗಲಕೋಟ :ಇಂದು ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾ ಕಾರ್ಯಕಾರಣಿ ಸಭೆ ಇಂದು ನಗರ ಸಭೆ ಸಭಾ ಭವನ‌ ನವನಗರದಲ್ಲಿ ಜರುಗಿತು ಕೆಪಿಸಿಸಿ ಕಾರ್ಯಾದ್ಯಕ್ಷರಾದ ಶ್ರೀ ಎಸ್ ಆರ್ ಪಾಟೀಲರು ಭಾಗವಹಿಸಿದ್ದರು
ಸಭೆಯಲ್ಲಿ ಬಾಗಲಕೋಟ ಮತಕ್ಷೇತ್ರದ ಶಾಸಕರಾದ ಶ್ರೀ ಹೆಚ್ ವೈ ಮೇಟಿ, ವಿಧಾನಪರಿಷತ್ತ ಸದಸ್ಯರಾದ ಶ್ರೀ ಆರ್ ಬಿ ತಿಮ್ಮಾಪೂರ,ಮಾಜಿ ಶಾಸಕರಾದ ಪಿ ಎಚ್ ಪೂಜಾರಿ, ಡಿಸಿಸಿ ಬ್ಯಾಂಕ್  ಅಧ್ಯಕ್ಷರಾದ ಶ್ರೀ ಅಜಯಕುಮಾರ ಸರನಾಯಕ,ಕೆಪಿಸಿಸಿ ಉಪಾಧ್ಯಕ್ಷರಾದ ಶ್ರೀ ಡಿ ಆರ್ ಪಾಟೀಲ್ ,ಕೆಪಿಸಿಸಿ ಪ್ರಧಾನಕಾರ್ಯದರ್ಶಿ ಬಾಗಲಕೋಟ ಜಿಲ್ಲಾ ಉಸ್ತುವಾರಿ ಹೊಂದಿದ ಶ್ರೀ ಪಾರಸಮಲ್ಲ ಜೈನ, ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ಸಮೀತಿ ಅಧ್ಯಕ್ಷರಾದ ಶ್ರೀ ಎಮ್ ಬಿ ಸೌದಗಾರ,ಕೆಪಿಸಿಸಿ ಜಿಲ್ಲಾ ಘಟಕದ ಅಧ್ಯಕ್ಷರು, ಜಿಲ್ಲಾ ಪಂಚಾಯತ ಸದಸ್ಯರು,ತಾಲೂಕ‌ ಪಂಚಾಯತ ಸದಸ್ಯರು, ಗ್ರಾಮ ಪಂಚಾಯತ‌ ಸದಸ್ಯರು ಹಾಗೂ ಬಾಗಲಕೋಟ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು

 

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಕಾರ್ಯಾದ್ಯಕ್ಷರಾದ ಶ್ರೀ ಎಸ್ ಆರ್ ಪಾಟೀಲರು ಬೂತ್ ಮಟ್ಟದ ಸದಸ್ಯರು ತಮ್ಮ ಬೂತಿನಲ್ಲಿ‌ ಗಮನಹರಿಸಿ ಪಕ್ಷದ ಜನಪ್ರಿಯ ಯೋಜನೆಗಳನ್ನು  ಮನೆ ಮನೆಗೆ ತೆರಳಿ ತಿಳಿಸಲು ಸೂಚಿಸಿ ಬೂತ್ ಮಟ್ಟದ ಸದಸ್ಯರು ತಮಗೆ ನೇಮಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದಲ್ಲಿ ೨೦೧೮ರಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವುದು  ಖಚಿತ ಎಂದು ಹೇಳಿದರು

Comments