UK Suddi
The news is by your side.

ಶ್ರೀಲಂಕಾ ವಿರುದ್ಧ ಮೂರನೆ ಏಕದಿನ ಪಂದ್ಯ:ಭರ್ಜರಿ ಜಯದೊಂದಿಗೆ ಸರಣಿ ತನ್ನದಾಗಿಸಿಕೊಂಡ ಭಾರತ.


ನಿನ್ನೆ ನಡೆದ ಶ್ರೀಲಂಕಾ ವಿರುದ್ಧದ ಮೂರನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ಇಂದು 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

 ಈ ಗೆಲುವಿನೊಂದಿಗೆ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಇನ್ನೂ ಎರಡು ಪಂದ್ಯಗಳು ಆಡಲು ಬಾಕಿ ಇರುವಾಗಲೇ ಭಾರತ 3-೦ ಅಂತರದಲ್ಲಿ ಸರಣಿ ಜಯಿಸಿದೆ.
     ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೂರನೆ ಪಂದ್ಯದಲ್ಲಿ ರೋಹಿತ್ ಶರ್ಮ ಔಟಾಗದೆ 124 ರನ್(146ಎ, 16ಬೌ, 1ಸಿ) ಮತ್ತು ಮಹೇಂದ್ರ ಸಿಂಗ್ ಧೋನಿ ಔಟಾಗದೆ 67 ರನ್( 86ಎ,4ಬೌ,1ಸಿ) ನೆರವಿನಲ್ಲಿ ಇನ್ನೂ 29 ಎಸೆತಗಳು ಬಾಕಿ ಇರುವಾಗಲೇ ೪ ವಿಕೆಟ್ ನಷ್ಟದಲ್ಲಿ 218 ರನ್ ಗಳಿಸಿತು.

 ಇದಕ್ಕೂ ಮೊದಲು ಟಾಸ್ ಜಯಿಸಿದ ಶ್ರೀಲಂಕಾ ತಂಡದ ನಾಯಕ ಚಾಮರಾ ಕಪುಗೆಡೆರಾ ಬ್ಯಾಟಿಂಗ್ ಆಯ್ದುಕೊಂಡು 9 ವಿಕೆಟ್ ನಷ್ಟಕ್ಕೆ 217ರನ್ ಗಳಿಸಿತ್ತು.

Comments