UK Suddi
The news is by your side.

೧೨ನೇ ಶತಮಾನದಲ್ಲಿ ಬಸವಣ್ಣನವರು ನುಡಿದಂತೆ ನಡೆದಿರುವ ಮಾದರಿಯಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರವು ಸಹ ಅದೇ ಮಾದರಿಯನ್ನು ಅನುಸರಿಸಿ ಈ ಭಾಗದ ಸಮಗ್ರ ಅಭಿವೃದ್ಧಿಗೆ ಸದಾಕಾಲ ಶ್ರಮಿಸುತ್ತಿದೆ:ಎಸ್ ಆರ್ ಪಾಟೀಲ.

ಬೀದರ: ಬೀದರ್ ಜಿಲ್ಲೆಯ ಬಾಲ್ಕಿ ವಿಧಾನಸಭಾ ಮತಕ್ಷೇತ್ರದ ಬೂತ್ ಮಟ್ಟದ ಸದಸ್ಯರ‌ ಸಮಾವೇಶ ಇಂದು ನಡೆಯಿತು.

ಸಮಾವೇಶದಲ್ಲಿ ಕೆಪಿಸಿಸಿ ಕಾರ್ಯಾದ್ಯಕ್ಷರಾದ ಶ್ರೀ ಎಸ್ ಆರ್ ಪಾಟೀಲರು ಭಾಗವಹಿಸಿದ್ದರು. AICC ಕಾರ್ಯದರ್ಶಿಯಾದ ಶ್ರೀ  ಡಾ ಸಾಖೆ  ಶೈಲಜನಾತ್ ಬೀದರ್ ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ ಖಂಡ್ರೆ, ವಿಧಾನಪರಿಷತ್ತ ಸದಸ್ಯರಾದ ಶ್ರೀ ವಿಜಯಸಿಂಗ್ ,ಶಾಸಕರಾದ ಶ್ರೀ  ರಾಜಶೇಖರ ಪಾಟೀಲ್, ಬೀದರ್ ಜಿಲ್ಲೆಯ ಕಾಂಗ್ರೆಸ್ ಕಮಿಟಿ ಅಧ್ಯಕ್ಷರಾದ ಶ್ರೀ ಖಾಜಿ ಅರ್ಷದ ಅಲಿ,ನೂತನ ಕೆಪಿಸಿಸಿ ಪಧಾದಿಕಾರಿಗಳು/ರಾಜ್ಯ ಕಾರ್ಯದರ್ಶಿಗಳು ಜಿಲ್ಲಾ ಪಂಚಾಯತ ಸದಸ್ಯರು, ತಾಲ್ಲೂಕು ಪಂಚಾಯತ ಸದಸ್ಯರು, ಗ್ರಾಮ ಪಂಚಾಯತ ಸದಸ್ಯರು ಬಾಲ್ಕಿ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರು, ಸಾವಿರಾರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಕ್ಷದ ಅಭಿಮಾನಿಗಳು ಸಮಾವೇಶದಲ್ಲಿ ಉಪಸ್ಥಿತರಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಕಾರ್ಯಾದ್ಯಕ್ಷರಾದ ಶ್ರೀ ಎಸ್ ಆರ್ ಪಾಟೀಲರು, ೧೨ನೇ ಶತಮಾನದಲ್ಲಿ ಬಸವಣ್ಣನವರು ನುಡಿದಂತೆ ನಡೆದಿರುವ ಮಾದರಿಯಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರವು ಸಹ ಅದೇ ಮಾದರಿಯನ್ನು ಅನುಸರಿಸಿ ಈ ಭಾಗದ ಸಮಗ್ರ ಅಭಿವೃದ್ಧಿಗೆ ಸದಾಕಾಲ ಶ್ರಮಿಸುತ್ತಿದೆ  ಆದುದರಿಂದ ಈ ಭಾಗದ ಜನತೆ  ಇದನ್ನು ಅರಿತುಕೊಂಡು ಮುಂಬರುವ ೨೦೧೮ ಕ್ಕೆ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಕರೆ ನೀಡಿದರು.

Comments