UK Suddi
The news is by your side.

ಇಷ್ಟಾರ್ಥಗಳ ಈಡೇರಿಸುವ ಸಂಕೇಶ್ವರದ ನೀಲಗಾರ ಗಣಪತಿ.

ಬೆಳಗಾವಿ:ಜಿಲ್ಲೆಯ ಸಂಕೇಶ್ವರ ಇಲ್ಲಿನ ಐತಿಹಾಸಿಕ ಪ್ರಸಿದ್ಧ ಹೆದ್ದೂರಶೆಟ್ಟಿ ಗಲ್ಲಿಯಲ್ಲಿನ ನೀಲಗಾರ ಗಣಪತಿಯ ದರ್ಶನಕ್ಕೆ ಕಳೆದ ಐದು ದಿನಗಳಿಂದ ಜನ ಪ್ರವಾಹವೇ ಹರಿದು ಬರುತ್ತಿದೆ. 

ದೂರದ ಮುಂಬೈ, ಪುಣೆ, ಸಾತಾರಾ, ಕರಾಡ, ಆಜರಾ, ಗಡಿಂಗ್ಲಜ, ಸಾವಂತವಾಡಿ, ಗೋವಾ, ಬೆಳಗಾವಿ, ಹುಬ್ಬಳ್ಳಿ, ವಿಜಾಪೂರ, ಬಾಗಲಕೋಟೆಗಳಿಂದ ಜನರು ನೀಲಗಾರ ಗಣಪತಿಯ ದರ್ಶನಕ್ಕೆ ಬರುತಿದ್ದಾರೆ. 

ಬೆಳಗ್ಗೆ 5 ಗಂಟೆಯಿಂದ ಪುರುಷರು ಮತ್ತು ಸ್ತ್ರೀಯರು ಎರಡು ಪಾಳಿಗಳಲ್ಲಿ ನಿಲ್ಲುತಿದ್ದಾರೆ. ಒಂದು ಕಿ.ಮಿ ದೂರದವರೆಗೂ ಪಾಳಿ ಇರುತ್ತದೆ. 

ಅಲ್ಲದೆ ನಾನಾ ರೀತಿಯ ಅಂಗಡಿಗಳು ರಸ್ತೆಯ ಬದಿಗೆ ತಲೆ ಎತ್ತಿವೆ. ಇಲ್ಲಿನ ಗಣಪತಿಗೆ ಬೇಡಿಕೊಂಡರೆ ಈಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ನಂಬಿಕೆಯೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಹರಿದು ಬರುತ್ತಿರುವುದಕ್ಕೆ ಸಾಕ್ಷಿಯಾಗಿದೆ.

Comments