UK Suddi
The news is by your side.

 ಬೀದರ ಬ್ಲಾಕ್ ಕಾಂಗ್ರೆಸ್ ಸಮಿತಿ (ಉತ್ತರ) ವಿಧಾನಸಭಾ ಮತಕ್ಷೇತ್ರದ ಕಾರ್ಯಕರ್ತರ ಸಭೆ

ಬೀದರ ಕಾಂಗ್ರೆಸ್ ಸಮಿತಿ ಬೀದರ ಬ್ಲಾಕ್ ಕಾಂಗ್ರೆಸ್ ಸಮಿತಿ (ಉತ್ತರ) ಸ್ಥಳೀಯ ಶಾಸಕರ ಕಛೇರಿಯಲ್ಲಿ ವಿಧಾನಸಭಾ ಮತಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಕೆಪಿಸಿಸಿ ಕಾರ್ಯಾದ್ಯಕ್ಷರಾದ ಶ್ರೀ ಎಸ್ ಆರ್ ಪಾಟೀಲರು ಭಾಗವಹಿಸಿದ್ದರು.
ಸಭೆಯಲ್ಲಿ AICC ಕಾರ್ಯದರ್ಶಿ ಶ್ರೀ ಡಾ ಸಾಖೆ ಶೈಲಜೆನಾತ , ಬೀದರ ಉತ್ತರ ಶಾಸಕರಾದ  ಶ್ರೀ ರಹಿಂ ಖಾನ್ ,ವಿಧಾನಪರಿಷತ್ತ ಸದಸ್ಯರಾದ ಶ್ರೀ ವಿಜಯಸಿಂಗ್, ಮಾಜಿ ವಿಧಾನಪರಿಷತ್ತ ಸದಸ್ಯರಾದ ರತ್ನಾಕುಸನೂರ, ಮಾಜಿ ಸಂಸದರಾದ ನರಸಿಂಗರಾವ ಸೂರ್ಯವಂಶಿ  ಬೀದರ ಜಿಲ್ಲೆಯ ಕಾಂಗ್ರೆಸ್ ಕಮಿಟಿ ಅಧ್ಯಕ್ಷರಾದ ಶ್ರೀ ಖಾಜಿ ಅರ್ಷದ ಅಲಿ, ಕೆಪಿಸಿಸಿ ಪದಾಧಿಕಾರಿಗಳು/ರಾಜ್ಯಕಾರ್ಯದರ್ಶಿಗಳು,ಜಿಲ್ಲಾ ಪಂಚಾಯತ ಸದಸ್ಯರು, ತಾಲ್ಲೂಕು ಪಂಚಾಯತ ಸದಸ್ಯರು ಗ್ರಾಮ ಪಂಚಾಯತ‌ ಸದಸ್ಯರು, ಬೀದರ (ಉತ್ತರ) ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರು ,ಕಾರ್ಯಕರ್ತರು, ಕಾಂಗ್ರೆಸ್ ಪಕ್ಷದ ಅಭಿಮಾನಿಗಳು ಸಭೆಯಲ್ಲಿ ಉಪಸ್ಥಿತರಿದ್ದರು 
ಸಭೆ ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಕಾರ್ಯಾದ್ಯಕ್ಷರಾದ ಶ್ರೀ ಎಸ್ ಆರ್ ಪಾಟೀಲರು  ಅಖಂಡ ಭಾರತ ದೇಶದಲ್ಲಿ ಕನ್ಯಾಕುಮಾರಿ ಯಿಂದ ಕಾಶ್ಮೀರದವರೆಗೆ ಸರ್ವ ಜನಾಂಗಗಳ ಸರ್ವ ಧರ್ಮಿಯರ ಸಮಾಜದ ಎಲ್ಲ ವರ್ಗಗಳ ಸಮನಾಗಿ ನೋಡುತ್ತಿರುವುದು ಯಾವುದಾದರೂ ಒಂದು ರಾಜಕೀಯ ಪಕ್ಷ ಇದ್ದರೆ ಅದು ಕಾಂಗ್ರೆಸ ಪಕ್ಷ ಎಂದು  ಹೇಳುತ್ತಾ  ಕರ್ನಾಟಕ ರಾಜ್ಯದಲ್ಲಿ ಒಂದು ಕುಟುಂಬದ ಹಿರಿಯ ಸದಸ್ಯರಿಂದ ಹಿಡಿದು ಕಿರಿಯ ಸದಸ್ಯರಲ್ಲಿ ಒಬ್ಬರಾದರು ಸರ್ಕಾರದ ಯಾವುದಾದರೂ  ಒಂದು ಯೋಜನೆಯ ಫಲಾನುಭವಿ ಮಾಡಿದ್ದು ಅದು  ಕರ್ನಾಟಕದಲ್ಲಿ ಆಡಳಿತದಲ್ಲಿರುವ  ಸಕಲ ಭಾಗ್ಯಗಳ ವಿಧಾತರಾಗಿರುವ ಶ್ರೀ ಸಿದ್ದರಾಮಯ್ಯನವರ ನೇತ್ರತ್ವದಲ್ಲಿರುವ ಕಾಂಗ್ರೆಸ ಪಕ್ಷದ ಸರ್ಕಾರ.ಇಂತಹ ಜನಪ್ರಿಯ  ಕಾಂಗ್ರೆಸ್ ಪಕ್ಷವನ್ನು ಪುನಃ ೨೦೧೮ರಲ್ಲಿ  ಅಧಿಕಾರಕ್ಕೆ ತರಲು ಘಂಟಾ ಘೋಷವಾಗಿ ಮನವಿ ಮಾಡಿದರು.

Comments