UK Suddi
The news is by your side.

ಅಗಸನಕೊಪ್ಪ ಗ್ರಾಮದಲ್ಲಿ ಎಮ್.ಆರ್.ಎನ್ ಪೌಂಡೇಶನ ವತಿಯಿಂದ ಗ್ರಾಮ ಸಭೆ.

ಬಾಗಲಕೋಟ:ಇಂದು ಬೀಳಗಿ ಮತಕ್ಷೇತ್ರದ ಬಾದಾಮಿ ತಾಲೂಕಿನ ಅಗಸನಕೊಪ್ಪ ಗ್ರಾಮದಲ್ಲಿ ಎಮ್.ಆರ್.ಎನ್ (ನಿರಾಣಿ) ಪೌಂಡೇಶನ್ ದ ವತಿಯಿಂದ ಗ್ರಾಮ ಸಭೆಯು ನಡೆಯಿತು. ಶ್ರೀ ಮುರುಗೇಶ ಆರ್. ನಿರಾಣಿಯವರು ಮಾತನಾಡಿ ಯುವ ಜನರ ಸ್ವಾವಲಂಭನೆಯ ಬದುಕು ಮತ್ತು ಮಹಿಳೆಯ ಸಭಲೀಕರಣ ಇನ್ನೀತರ ಹಲವಾರು ಯೋಜನೆಗಳ ಕುರಿತು ಮಾಹಿತಿ  ಹೇಳಿದರು. ಇದೇ ಸಂದರ್ಬದಲ್ಲಿ ಅಲ್ಲಿಯ ಗ್ರಾಮದ ಮುಖ್ಯಸ್ಥರು  ಶ್ರೀ ಸಂಗಮೇಶ ಆರ್. ನಿರಾಣಿಯವರಿಗೆ ಶ್ರೇಷ್ಠ ಉದ್ಯಮ ಪ್ರಶಸ್ತಿ ಲಭಿಸಿದ್ದಕ್ಕಾಗಿ ಸನ್ಮಾನಿಸಿದರು. ಹಾಗೂ ಐ.ಜಿ ನ್ಯಾಮಗಡರಿಗೂ ಕೂಡಾ ಸನ್ಮಾನಿಸಿದರು.  ಮಹೇಶ ನಾಡಗೌಡ ಹಣಮಂತಗೌಡ ಪಾಟೀಲ, ಕೃಷ್ಣಾ ಉಗೆನ್ನವರ, ಹೂವಪ್ಪ ರಾಠೋಡ, ಗೋವಿಂದ ಗೌಡರ, ಸಂಗಯ್ಯ ಸರಗಣಾಚಾರಿ, ಮೆನಸಗಿ, ರವಿ ಪಾಟೀಲ ಮೌಲಾಸಾಬ ಕೇರೂರ ಹಾಗೂ ಗಣ್ಯಮಾನ್ಯರು, ಗ್ರಾಮಸ್ಥರು ಭಾಗವಹಿಸಿದರು.

Comments