ರಬಕವಿ-ಬನಹಟ್ಟಿ:ಎಬಿವಿಪಿ ಕಾರ್ಯಕರ್ತರಿಂದ ವಿನೂತನವಾಗಿ ಶಿಕ್ಷಕರ ದಿನ ಆಚರಣೆ.
ಬಾಗಲಕೋಟ:ಜಿಲ್ಲೆಯ ರಬಕವಿ-ಬನಹಟ್ಟಿಯಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಇಂದು ಅಖೀಲ ಭಾರತ ವಿಧ್ಯಾರ್ಥಿ ಪರಿಷತ್ತು ವತಿಯಿಂದ ನಗರದ ಎಲ್ಲಾ ಶಾಲಾ-ಕಾಲೇಜುಗಳಿಗೆ ತೆರಳಿ ಎಲ್ಲ ಶಿಕ್ಷಕ ಶಿಕ್ಷಕಿಯರಿಗೆ ಸಿಹಿಯನ್ನು ಹಂಚಿ ಮತ್ತು ಸ್ಥಳಿಯ ಎಮ್ ವಿ ಪಟ್ಟಣ ಕಾಲೇಜಿನಲ್ಲಿ ಸಸಿಯನ್ನು ನೇಡುವುದರ ಮುಖಾಂತರ ವಿನೂತನವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಎಬಿವಿಪಿ ತಾಲೂಕು ಸಂಚಾಲಕರಾದ ಮಂಜುನಾಥ ಹವಿನಾಳ,ಎಬಿವಿಪಿ ನಗರ ಉಪಾಧ್ಯಕ್ಷರಾದ-ವಿನಾಯಕ ಜತ್ತಿ ಗುರುಗಳು,ಎಬಿವಿಪಿ ನಗರ ಕಾರ್ಯದರ್ಶೀಯಾದ ವಿಶಾಲ ಕದಮ್ ಹಾಗೂ ಎಲ್ಲ ಕಾರ್ಯಕರ್ತರು ಉಪಸ್ತಿತರಿದ್ದರು..
-ಗುರು ಎಸ್ ಎ.