ದೊಡವಾಡ:ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಬಳಗದ ವತಿಯಿಂದ ಗಣೇಶ ಉತ್ಸವ ಪ್ರಯುಕ್ತ ಅನ್ನಪ್ರಸಾದ ಕಾರ್ಯಕ್ರಮ.
ಬೆಳಗಾವಿ:ಜಿಲ್ಲೆಯ ಸಾವಿರ ಮೇಟಿ ಒಕ್ಕಲು ನಾಡು ಎಂದೇ ಖ್ಯಾತಿ ಪಡೆದಿರುವ ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದ ಕೊಪ್ಪದ ಅಗಸಿಯಲ್ಲಿ ಕ್ರಾಂತಿ ವೀರ ಶೂರ ಸಂಗೊಳ್ಳಿ ರಾಯಣ್ಣ ಗೆಳೆಯರ ಬಳಗದ ವತಿಯಿಂದ ಪ್ರತಿಷ್ಠಾಪಿಸಿರುವ 13ನೇ ವರ್ಷದ ಗಣೇಶ ಉತ್ಸವ ಆಚರಣೆ ಪ್ರಯುಕ್ತ ಇಂದು ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮಕ್ಕೆ ಊರಿನ ಗ್ರಾಮಸ್ಥರು,ಅಕ್ಕ ತಂಗಿಯರು, ತಾಯಂದಿರು,ಯುವಕರು,ಸುತ್ತ ಮುತ್ತಲಿನ ಗ್ರಾಮಸ್ಥರು ಸೇರಿದಂತೆ ಕೊಪ್ಪದ ಅಗಸಿಯಲ್ಲಿ ಪ್ರತಿಷ್ಠಾಪಿಸಿರುವ ಗಣೇಶನ ದರ್ಶನ ಪಡೆದು ಪ್ರಸಾದ ಸ್ವೀಕರಸಿ ಗಣೇಶನ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯರು ಹಾಗು ಬೆಳಗಾವಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಶಂಕರ ಮಾಡಲಗಿ,ತಾಲೂಕು ಪಂಚಾಯತ ಸದಸ್ಯರಾದ ಸಂಗಯ್ಯ ದಾಬಿಮಠ, ಕ್ರಾಂತಿ ವೀರ ಶೂರ ಸಂಗೊಳ್ಳಿ ರಾಯಣ್ಣ ಗೆಳೆಯರ ಬಳಗದ ಸರ್ವ ಸದಸ್ಯರು ಸೇರಿದಂತೆ ಹಲವಾರು ಗಣ್ಯ ಮಾನ್ಯರು ಉಪಸ್ಥಿತರಿದ್ದರು.