ಸಿಡಿಲು ಬಡಿದು ರೈತ ಸಾವು.
ಬಾಗಲಕೋಟ:ಸಿಡಿಲು ಬಡಿದು ರೈತನೋರ್ವ ಸಾವನಪ್ಪಿದ ಘಟನೆ ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ನಿಂಬಲಗುಂದಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.
ನಿಂಬಲಗುಂದಿ ಗ್ರಾಮದ ಶೇಖಪ್ಪ ಸುಂಕದ (38) ಮೃತಪಟ್ಟ ವ್ಯಕ್ತಿ. ಹೊಲದಲ್ಲಿ ಕುರಿ ಕಾಯ್ದುಕೊಂಡು ಶುಕ್ರವಾರ ರಾತ್ರಿ ಮರಳಿ ಮನೆಗೆ ಬರುವಾಗ ಮಳೆ ಬರುತ್ತಿತ್ತು ಆಗ ಮರದ ಕೆಳಗೆ ನಿಂತುಕೊಂಡಿದ್ದ ಆ ಸಮಯದಲ್ಲಿ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಅಮೀನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.