UK Suddi
The news is by your side.

ಜವಳಿ ಇಲಾಖೆ ನೇಕಾರರಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದು ಅವುಗಳ ನೇಕಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು:ಹೆಚ್ ಬಿ ಪಾಟೀಲ.

ಬೆಳಗಾವಿ:ಕರ್ನಾಟಕ ರಾಜ್ಯ ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ವತಿಯಿಂದ ಬೆಳಗಾವಿಯ ವಿದ್ಯುತ್ ಮಗ್ಗಗಳ ಸೇವಾ ಕೇಂದ್ರವು ರಾಮದುರ್ಗದ ನೇಕಾರ ಪೇಟೆಯ ವಿಠ್ಠಲ ಹರಿ ಮಂದಿರದಲ್ಲಿ ನಿನ್ನೆ ವಿದ್ಯುತ್ ಮಗ್ಗಗಳ ನೇಕಾರರಿಗೆ ಒಂದು ದಿನದ ಕಾರ್ಯಾಗಾರ ಹಮ್ಮಿಕೊಂಡಿತ್ತು.
ಕಾರ್ಯಕ್ರಮದಲ್ಲಿ ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್. ಬಿ. ಪಾಟೀಲ ಅವರು ಮಾತನಾಡಿ, ಕೇಂದ್ರ ಸರ್ಕಾರದ ಜವಳಿ ಇಲಾಖೆಯು ವಿದ್ಯುತ್ ಮಗ್ಗಗಳ ಅಭಿವೃದ್ಧಿಗಾಗಿ ಜಾರಿಗೆ ತಂದಿರುವ ಪವರ್ ಟೆಕ್ಸ ಇಂಡಿಯಾ ಯೋಜನೆ ಕುರಿತು ಮಾಹಿತಿ ನೀಡಿದರಲ್ಲದೆ, ಜವಳಿ ಇಲಾಖೆ ನೇಕಾರರಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದು ಅವುಗಳ ನೇಕಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂದರು.


ರಾಮದುರ್ಗ ಪಟ್ಟಣದ ಸುತ್ತಮುತ್ತ ಇರುವ ವಿದ್ಯುತ್ ಮಗ್ಗಗಳ ನೇಕಾರರು ಕಾರ್ಯಾಗಾರದಲ್ಲಿ ಭಾಗವಹಿಸಿ ಮಾಹಿತಿ ಪಡೆದರು. ಅಲ್ಲದೆ ಅರ್ಹ ಫಲಾನುಭವಿಗಳು ಸ್ಥಳದಲ್ಲೇ ಅರ್ಜಿ ಸಲ್ಲಿಸಿದರು.

Comments