UK Suddi
The news is by your side.

ಬನಹಟ್ಟಿ ನಗರದ ಆರಾಧ್ಯ ದೈವ ಶ್ರೀ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವ ಇಂದಿನಿಂದ.

ಬಾಗಲಕೋಟ:ಕರ್ನಾಟಕದ ಮ್ಯಾಂಚೆಸ್ಟರ್ ಎಂದೇ ಕರೆಯಲ್ಪಡುವ ಬನಹಟ್ಟಿ ನಗರವು ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ,ಸಹಕಾರ, ಜವಳಿ ಕ್ಷೇತ್ರದಲ್ಲಿ ತನ್ನದೇ ಆದ ಅಪಾರ ಕೊಡುಗೆಗಳನ್ನು ನಾಡಿಗೆ ನೀಡುತ್ತಾ ಬಂದಿದೆ.

ಬನಹಟ್ಟಿ ನಗರ ಹಾಗು ಸುತ್ತ ಮುತ್ತಲಿನ ಗ್ರಾಮದ ಆರಾಧ್ಯ ದೈವ ಶ್ರೀ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವವು ಪ್ರತಿ ವರ್ಷವೂ ಅತಿ ವಿಜೃಂಭಣೆಯಿಂದ ನಡೆಯುತ್ತ ಬಂದಿದೆ.

ಈ ಜಾತ್ರೆಯಲ್ಲಿ ಜಾತಿ ಮತ ಭೇದವಿಲ್ಲದೆ ಹರಕೆ ರೂಪದಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ಮದ್ದು ಸುಡುವದು ವಿಶೇಷವಾಗಿದೆ.

ಮದ್ದಿನ ಜಾತ್ರೆ ಎಂದೇ ಖ್ಯಾತಿ ಪಡೆದಿರುವ ಬನಹಟ್ಟಿಯ ಶ್ರೀ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವವು ಇಂದಿನಿಂದ ಮೂರು ದಿನಗಳ ಕಾಲ ಅತಿ ವಿಜೃಂಭಣೆಯಿಂದ ಜರುಗಲಿದೆ.

-ಗುರು ಅರಳಿಮರದ

Comments