UK Suddi
The news is by your side.

ಬೂತ್ ಮಟ್ಟದಲ್ಲಿ ಸಮನ್ವಯತೆಯನ್ನು ಸಾಧಿಸಿ ಸರ್ವ ಸನ್ನದ್ಧರಾಗಿ ಮುನ್ನುಗ್ಗಿ:ಬಿ ಎಸ್ ಯಡಿಯೂರಪ್ಪ.


ಬೆಂಗಳೂರು:ಮಾಜಿ ಮುಖ್ಯಮಂತ್ರಿಗಳು ಹಾಗು ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೂತ್ ಸಶಕ್ತೀಕರಣ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ದಕ್ಷಿಣ ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳ ಉಸ್ತುವಾರಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಬೂತ್ ಮಟ್ಟದಲ್ಲಿ ಚುನಾವಣೆಯನ್ನು ಗೆಲ್ಲುವ ನಿರ್ದಿಷ್ಟ ಕಾರ್ಯತಂತ್ರಗಳ ಕುರಿತಾದ ಅನೇಕ ಮಾಹಿತಿಗಳನ್ನು ಯಡಿಯೂರಪ್ಪನವರು ತಿಳಿಸಿಕೊಟ್ಟರು. ಮುಂದಿನ ಚುನಾವಣೆಗಳನ್ನು ಎದುರಿಸಲು ನಿರ್ದಿಷ್ಟ ಕಾರ್ಯತಂತ್ರಗಳ ಜೊತೆಗೆ ಬೂತ್ ಮಟ್ಟದಲ್ಲಿ ಸಮನ್ವಯತೆಯನ್ನು ಸಾಧಿಸಿ ಸರ್ವ ಸನ್ನದ್ಧರಾಗಿ ಮುನ್ನುಗ್ಗುವಂತೆ ಯಡಿಯೂರಪ್ಪನವರು ಕರೆ ನೀಡಿದರು.

Comments