UK Suddi
The news is by your side.

ವಿಜಯಪುರ:ದಿಗ್ವಿಜಯ ದಿವಸ ಆಚರಣೆ.

ವಿಜಯಪುರ:ದಿಗ್ವಿಜಯ ದಿವಸ 11 ಸೆಪ್ಟೆಂಬರ್ 1893, ಇಂದು 125 ವರ್ಷ ತುಂಬಿದ ಸಂದರ್ಭದಲ್ಲಿ ನಡೆದ  ಕಾರ್ಯಕ್ರಮ ಅಂದು ವೀರಸನ್ಯಾಸಿ ಸ್ವಾಮಿ ವಿವೇಕಾನಂದ ಅಮೇರಿಕದಲ್ಲಿ ನಡೆದ ಸರ್ವಧರ್ಮ ಸಮೇಳನದಲ್ಲಿ ಸನಾತನ ಹಿಂದೂ ಧರ್ಮದ ಕಿರ್ತಿಪತಾಕಿಯನ್ನು  ಗಗನದೆತ್ತರಕ್ಕೆ ಹಾರಿಸಿದ ದಿನ, ಪಾಶ್ಚಿಮಾತ್ಯ. ದೇಶಗಳಿಗೆ ಸನಾತನ ಹಿಂದೂಧರ್ಮದ ಮಹತ್ವವನ್ನು ಇಡಿ ವಿಶ್ವಕ್ಕೇ ಸಾರಿದ ದಿನ. ಇದರ ಪ್ರಯುಕ್ತವಾಗಿ ನಗರದ ಸ್ವಾಮಿ ವಿವೇಕಾನಂದ ಯುವ ಸೇವಾಸಂಘ ವಿಜಯಪುರ ವತಿಯಿಂದ ದಿಗ್ವಿಜಯ ದಿವಸವನ್ನು ಆಚರಿಸಲಾಯಿತು.

ಮಹೇಶ ಕುಂಬಾರ ಅವರ ನೇತೃತ್ವದಲ್ಲಿ ದಿಗ್ವಿಜಯ ದಿವಸ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು, ನಗರದ ಗಣ್ಯಮಾನ್ಯರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸುವಲ್ಲಿ ಪಾತ್ರರಾದರು.

Comments