UK Suddi
The news is by your side.

ವಿಜೃಂಭಣೆಯಿಂದ ಜರುಗಿದ ಬನಹಟ್ಟಿಯ ಶ್ರೀ ಕಾಡಸಿದ್ದೇಶ್ವರ ರಥೋತ್ಸವ.

ಬಾಗಲಕೋಟ:ಉತ್ತರ ಕರ್ನಾಟಕದ ವಿಶೇಷ ಮದ್ದಿನ ಜಾತ್ರೆ ಎಂದೇ ಖ್ಯಾತಿ ಪಡೆದಿರುವ ಬನಹಟ್ಟಿಯ ಆರಾಧ್ಯ ದೈವ, ಬೇಡಿದ ವರಗಳ ನೀಡುವ ಶ್ರೀ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವವು ಇಂದು ಸಂಜೆ 8 ಗಂಟೆಗೆ ಅತಿ ವಿಜೃಂಭಣೆಯಿಂದ ಜರುಗಿತು.

ಇಂದು ಸಂಜೆ 4 ಗಂಟೆ ವೇಳೆಗೆ ಸೇರಿದ್ದ ಸಾವಿರಾರು ಭಕ್ತ ವೃಂದ ಸರಿ ಸುಮಾರು ಮೂವತ್ತೆರಡು ಲಕ್ಷ ರೂಪಾಯಿಯ ಪಟಾಕಿ ಸಿಡಿಸುವದರ ಮೂಲಕ ಜಾತ್ರೆಗೆ ಮತ್ತಷ್ಟು ಮೆರಗು ತಂದರು..

ನಾನಾ ಬಗೆಯ ಪಟಾಕಿ ಸಿಡಿಸುವ ಭಕ್ತರ ಸಮೂಹ, ಬಾನಲ್ಲಿ ವಿವಿದ ಬಣ್ಣದ ಚಿತ್ತಾರದ ಬಾಣಗಳು ನೋಡುಗರ ಕಣ್ಮನ ಸೆಳೆದವು.

-ಗುರು ಅರಳಿಮರದ

Comments