UK Suddi
The news is by your side.

ಅಭಿವೃದ್ದಿ ಕಾರ್ಯಗಳೇ ಪಕ್ಷಕ್ಕೆ ಶ್ರೀರಕ್ಷೆ-ದಯಾನಂದ ಪಾಟಿಲ್

ಬೆಳಗಾವಿ:ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೆ ತಂದಿರುವ ಜನಪರ ಅಭಿವೃದ್ದಿ ಕಾರ್ಯಗಳೇ ಪಕ್ಷಕ್ಕೆ ಶ್ರೀರಕ್ಷೆಯಾಗಿದೆ ಇದರಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೇ ಕಾಂಗ್ರೆಸ್ಸ್ ಅಧಿಕಾರಕ್ಕೆ ಬರಲಿದೆ ಎಂದು ಎಐಸಿಸಿ ಕಾರ್ಯಾಧರ್ಶಿ ದಯಾನಂದ ಪಾಟೀಲ ಹೇಳಿದರು.

ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದ ಶ್ರೀ ಜಡಿಸಿದ್ದೇಶ್ವರ ಸಮುದಾಯ ಭವನದಲ್ಲಿ ಬೂತ್ ಮಟ್ಟದ ಕಾಂಗ್ರೆಸ್ಸ್ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ ಸಿದ್ದರಾಮಯ್ಯ ಅವರು ಹಸಿವು ಮುಕ್ತ ರಾಜ್ಯವನ್ನಾಗಿಸಲು ಅನ್ನ ಭಾಗ್ಯ, ಕ್ಷೀರ ಭಾಗ್ಯ, ವಿದ್ಯಾಸಿರಿ ಮುಂತಾದ ಜನಪರ ಯೋಜನೆಗಳನ್ನು ಜಾರಿಗೆ ತಂದು ಅವುಗಳನ್ನು ಅನುಷ್ಠಾನಗೋಳಿಸಿದ್ದಾರೆ. ಇದು ಎಲ್ಲ ವರ್ಗದ ಜನರಿಗೆ ಸಹಾಯಕಾರಿಯಾಗಿದೆ. ಇದರಂತೆ ಮುಂಬರುವ ಚುನಾವಣೆಯಲ್ಲಿ ಜನರು ಕಾಂಗ್ರೆಸ್ಸ್ ಪಕ್ಷಕ್ಕೆ ಆಶಿರ್ವದಿಸಲಿದ್ದಾರೆ ಎಂದರು. ಕಾಂಗ್ರೆಸ್ಸ್ ಪಕ್ಷ ರೈತರ ಪರವಾಗಿದೆ.ಸತತವಾಗಿ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ರುಪಾಯಿ ಐವತ್ತು ಸಾವಿರದವರೆಗೆ ಸಾಲ ಮನ್ನಾ ಮಾಡಿ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ.ಅದರೆ ರೈತರ ಬಗ್ಗೆ ಸಧಾವಕಾಲವು ಮೊಸಳೆ ಕಣ್ಣೀರು ಸುರಿಸುವ ಬಿಜೆಪಿಯವರು ಕೇಂದ್ರದ ಮೇಲೆ ಒತ್ತಡ ಹೇರಿ ರಾಷ್ಟ್ರೀಕೃತ ಬ್ಯಾಂಕುಗಳ ರೈತರ ಸಾಲ ಮನ್ನಾ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು.

ಕಾರ್ಯಕ್ರಮದಲ್ಲಿ ಬೈಲಹೊಂಗಲ ಬ್ಲಾಕ್ ಅಧ್ಯಕ್ಷ ಶಿವರುದ್ರಪ್ಪ ಹಟ್ಟಿಹೋಳಿ,ಮುರಗೋಡ ಬ್ಲಾಕ್ ಅಧ್ಯಕ್ಷ ಶಂಕರಗೌಡ ಪಾಟೀಲ, ಜಿಲ್ಲಾ ಯೂತ್ ಕಾಂಗ್ರೆಸ್ಸ್ ಅಧ್ಯಕ್ಷ ಕಾರ್ತಿಕ ಪಾಟೀಲ ಸೇರಿದಂತೆ ಮಾಜಿ ಎಂ ಎಲ್ ಸಿ ಮಹಾಂತೇಶ ಕೌಜಲಗಿ, ಕಾಂಗ್ರೆಸ್ಸ್ ಧುರೀಣರಾದ ಬಸವರಾಜ ಕೌಜಲಗಿ, ಬಸವರಾಜ ಬಾಳೆಕುಂದರಗಿ, ಕಿರಣ ಸಾಧುನವರ,ಜಿಪಂ ಸದಸ್ಯ ಅನಿಲ್ ಮಾಸ್ತಮರ್ಡಿ, ಮರಕುಂಬಿ ಗ್ರಾಪ ಅಧ್ಯಕ್ಷ ಸುರೇಶ ಮುರಗೋಡ, ಬಸವರಾಜ ಪರಂನವರ, ಗ್ರಾಮದ ಹಿರಿಯರಾದ ಶ್ರೀಶೈಲ ವಾಳಿ, ಶಿವಶಂಕರ ಅರಳಿಮರದ, ಬಾಬು ಮುರಗೋಡ, ಮಹಾದೇವ ಪೂಜಾರ,ಅಶೋಕ ಯಲಿಗಾರ, ಮಲ್ಲಪ್ಪ ಯರಿಕಿತ್ತೂರ,ಚನ್ನಬಸಪ್ಪ ಅರಳಿಮರದ,ಸಿದ್ದಪ್ಪ ಕರಿಗಾರ ಮುಂತಾದವರು ಉಪಸ್ಥಿತರಿದ್ದರು.

ಶಿವಲಿಂಗಪ್ಪ ಪರಂಡಿಯವರ ಮಾರ್ಗದರ್ಶನದೊಂದಿಗೆ ಬೂತ್ ಮಟ್ಟದ ಕಾರ್ಯಕರ್ತರಾದ ಬಸವರಾಜ ಅಂದಾನಶೆಟ್ಟಿ,ಯಲ್ಲಪ್ಪ ಅಲಕ್ಕನವರ, ನ್ಯಾಯವಾದಿ ವಿಜಯಕುಮಾರ ಅಲಸಂದಿ,ಶಿವಾನಂದ ಬೆಳವಡಿ ಕಾರ್ಯಕ್ರಮ ಯಶಸ್ವಿಗೋಳಿಸಿದರು.

ಅಶೋಕ ಪರಂಡಿ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.

-ಗುರು ಅರಳಿಮರದ

Comments